ಕೊರಟಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಚನ್ನರಾಯನದುರ್ಗಾ ಹೋಬಳಿ ಕುರಂಕೋಟೆ ದೊಡ್ಡಕಾಯಪ್ಪ ಸಮುದಾಯ ಭವನದಲ್ಲಿ ಬಹುಜನ ಸಮಾಜ ಪಕ್ಷದ ವತಿಯಿಂದ ಬಹುಜನ ಜಾಗೃತಿ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಜಾಗೃತಿ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಅರಕಲವಾಡಿ ನಾಗೇಂದ್ರ ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಮಿಸಿದ್ದರು.
ಶಿಬಿರದಲ್ಲಿ ಕ್ಷೇತ್ರದ ಜನರಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ. ಆರ್ಥಿಕತೆ. ಮತ್ತು ಹಕ್ಕುಗಳ ಬಗ್ಗೆ . ಮುಂಬರುವ ತಾಲೂಕ ಪಂಚಾಯತ್ ಜಿಲ್ಲಾ ಪಂಚಾಯತ್ ವಿಧಾನಸಭಾ ಚುನಾವಣೆಗಳ ಬಗ್ಗೆ ಮತದಾನ ಜಾಗೃತಿ . ತಾಲೂಕು ಹೋಬಳಿ ಬೂತ್ ಮಟ್ಟದ ಸಂಘಟನೆ ಮಾಡುವುದರ ಬಗ್ಗೆ ಹರಿವು ಮೂಡಿಸಿ. sc.st.obc. ದಲಿತ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ವಿಷಯಗಳ ಬಗ್ಗೆ ಹಾಗೂ ನಡೆಯುತ್ತಿರುವ ಶೋಷಣೆಗಳ ಬಗ್ಗೆ . ಕೊರಟಗೆರೆ ಮೀಸಲಾತಿ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತರೇ ಇದ್ದು ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರ ಬೆಂಬಲದಿಂದ ಮುಂದಿನ ಚುನಾವಣೆ ಹೇಗೆ ಮಾಡಬೇಕೆಂಬುದರ ಬಗ್ಗೆ ಶಿಬಿರದಲ್ಲಿ ಜಾಗೃತಿ ಮೂಡಿಸಲಾಯಿತು.
ಚೆನ್ನರಾಯನದುರ್ಗ ಹೋಬಳಿ ವ್ಯಾಪ್ತಿಯ 45ಕ್ಕೂ ಹೆಚ್ಚು ಯುವಕರು ಬಿಜೆಪಿ ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಬಹುಜನ ಸಮಾಜ ಪಕ್ಷ ಸೇರ್ಪಡೆಗೊಂಡರು. ಶಿಬಿರಕ್ಕೆ ಪಾಲ್ಗೊಂಡಿದ್ದ 350ಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ಉಚಿತವಾಗಿ ಸಂವಿಧಾನ ಪುಸ್ತಕವನ್ನು ನೀಡಲಾಯಿತು. ಪ್ರತಿಯೊಬ್ಬರೂ ಸಂವಿಧಾನ ಓದಿದರೆ ಕಾನೂನುಗಳ ಬಗ್ಗೆ ಅರಿವು ಮೂಡುವುದು ಪ್ರತಿಯೊಬ್ಬರು ಸಂವಿಧಾನಾತ್ಮಕವಾಗಿ ಹೋರಾಟ ಮಾಡಿ ತಮ್ಮಗಳ ಹಕ್ಕುಗಳನ್ನು ಪಡೆಯಬಹುದು. ಸಂವಿಧಾನ ಓದಿಕೊಂಡರೆ ಯಾವ ವ್ಯಕ್ತಿಯು ತಪ್ಪು ಮಾಡಲಾರ ಸಂವಿಧಾನ ಓದಿದರೆ ಪ್ರತಿಯೊಬ್ಬರು ಪ್ರಜ್ಞಾವಂತರ ಆಗುತ್ತಾರೆ ಎಂದು ಸಂವಿಧಾನ ಪುಸ್ತಕವನ್ನು ನೀಡಿ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ ರಾಜ್ಯ ಕಾರ್ಯದರ್ಶಿ ಶೂಲಯ್ಯ ಜಿಲ್ಲಾಧ್ಯಕ್ಷ ರಾಜಸಿಂಹ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಗಧಾಮಯ್ಯ ಕೊರಟಗೆರೆ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಜೆಟ್ಟಿ ಅಗ್ರಹಾರ ನಾಗರಾಜು ಟೈಗರ್ ನಾಗ್ ನಗರ ಅಧ್ಯಕ್ಷ ಮಂಜುನಾಥ ಉಪಾಧ್ಯಕ್ಷ ಗಟ್ಟಹಳ್ಳಿ ಸುರೇಶ್ ಕೃಷ್ಣ ಜಿಲ್ಲಾ ಉಪಾಧ್ಯಕ್ಷ ಶಿರಾ ಮಂಜುನಾಥ್ ಪಾವಗಡ ತಾಲೂಕ್ ಅಧ್ಯಕ್ಷ ಹನುಮಂತರಾಯಪ್ಪ ನರಸಿಂಹಮೂರ್ತಿ ಸುರೇಶ್ ಲಕ್ಕಣ್ಣ ಹರೀಶ್ ಸತೀಶ್ ವತ್ಸ ಹೇಮಂತ್ ನರೇಂದ್ರ ಕೆಂಪರಾಜು ಇನ್ನಿತರರು ಭಾಗಿಯಾಗಿದ್ದರು.