ತುಮಕೂರು: ಬ್ಲೂ ಬೇಬಿ ಸಿಂಡ್ರೋಮ್ ಹೊಂದಿದ ೬೧/೨ ವರ್ಷದ ಬಾಲಕಿಗೆ ಸಿದ್ಧಾರ್ಥ ಹಾರ್ಟ್ ಸೆಂಟರ್‌ನಲ್ಲಿ ನಡೆಸಲಾದ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಇದೊಂದು ಐತಿಹಾಸಿಕ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಮೈಲಿಗಲ್ಲು ಎಂದು ಸಾಹೇ ಕುಲಾಧಿಪತಿ ಡಾ. ಜಿ. ಪರಮೇಶ್ವರ ತಿಳಿಸಿದರು.
ನಗರದ ಶ್ರೀ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಟ್ಟಿನಿಂದಲೇ ಬ್ಲೂ ಬೇಬಿ ಸಿಂಡ್ರೋಮ್ ಹೊಂದಿದ ಬಾಲಕಿಗೆ ಉಚಿತವಾಗಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಜನನಿ(ಹೆಸರು ಬದಲಾಗಿದೆ) ಮೂಲತಃ ಈ ಮಗು ತುಮಕೂರು ಜಿಲ್ಲೆಯವರಾಗಿದ್ದು, ಶಸ್ತ್ರಚಿಕಿತ್ಸೆಯು ಸುದೀರ್ಘವಾಗಿ ೫ ಗಂಟೆಗಳ ಕಾಲ ನಡೆಸಲಾಯಿತು. ಮಗುವು ಸಂಪೂರ್ಣವಾಗಿ ಆರೋಗ್ಯಕರವಾಗಿದೆ ಎಂದರು.
ತುಮಕೂರಿನಿಂದ ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಯಾವುದೇ ಹಾರ್ಟ್ ಸೆಂಟರ್ ಇಲ್ಲದೆ ಇರುವುದು ಬೇಸರ ಸಂಗತಿಯಾಗಿತ್ತು. ಆದರೆ ಕಳೆದ ಒಂದು ವರ್ಷದಿಂದ ತುಮಕೂರು ಜಿಲ್ಲೆಯ ಹಾಗೂ ಸುತ್ತಮುತ್ತ ಜನಸಾಮಾನ್ಯರಿಗೆ ಹಾರ್ಟ್ ಸೆಂಟರ್ ತೆರೆದು ಆಸ್ಪತ್ರೆಯಲ್ಲಿ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತಿರುವುದಕ್ಕೆ ರೋಗಿಗಳಿಂದ ಪ್ರಶಂಸೆ ವ್ಯಕ್ತವಾಗುತ್ತಿರುವುದನ್ನು ನೋಡಿದರೆ ಆಸ್ಪತ್ರೆಯ ನಿರ್ಮಾಣಕ್ಕೆ ಸಾರ್ಥಕತೆ ಬಂದಂತಾಗಿದೆ ಎಂದು ಅವರು ನುಡಿದರು. ಕೋವಿಡ್ ಸಂದರ್ಭದಲ್ಲಿ ಮುನ್ನೆಚ್ಚೆರಿಕೆ ಕ್ರಮವಾಗಿ ಕಾರ್ಡಿಯಾಕ್ ಪ್ರೊಂಟಿಟ್ ವಿಭಾಗದಲ್ಲಿ ೬೦ ಐಸಿಯು ಬೆಡ್‌ಗಳನ್ನು ಏರ್ಪಡಿಸಲಾಗಿದೆ. ಅತಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಆರೋಗ್ಯ ಯೋಜನೆಗಳ ಸೇವೆ ಆಸ್ಪತ್ರೆಯಲ್ಲಿ ದೊರೆಯಲಿದೆ. ವಿಮಾ ಯೋಜನೆಗಳನ್ನೂ ಅಳವಡಿಸಿಕೊಳ್ಳಲಾಗಿದೆ. ಇದನ್ಮ್ನ ಜನಸಾಮಾನ್ಯರು ಬಳಸಿಕೊಳ್ಳಬಹ್ಮದು ಎಂದು ಡಾ.ಜಿ.ಪರಮೇಶ್ವರ ಅವರು ಮನವಿ ಮಾಡಿದರು.
ಆಸ್ಪತ್ರೆಯ ಮೂಲ ಧ್ಯೇಯ
ಸಮಾಜದ ಕಟ್ಟಕಡೆಯ ಬಡಜನರಿಗೆ ಸಂಕಷ್ಟ ಕಾಲದಲ್ಲಿ ಆರೋಗ್ಯ ಸೇವೆ ಸಕಾಲದಲ್ಲಿ ದೊರೆಯಲಿ ಎಂಬ ಗುರಿಯನ್ನು ಆಸ್ಪತ್ರೆ ಹೊಂದಿದೆ. ಗ್ರಾಮಾಂತರ ಪ್ರದೇಶದ ಜನ ದೂರದ ಮಹಾನಗರಗಳಿಗೆ ತೆರಳಿ ದುಬಾರಿ ಖರ್ಚು-ವೆಚ್ಚಗಳಿಗೆ ಸಿಲುಕಿಕೊಳ್ಳಬಾರದು ಎಂಬ ಉದ್ದೇಶದಿಂದ ಜನ ಸಾಮಾನ್ಯರಿಗೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಅತ್ಯಂತ ಕಡಿಮೆ ದರದಲ್ಲಿ ನೀಡುವ ಗುರಿಯಿಂದ ಆರಂಭಿಸಲಾದ ’ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಚಿಕಿತ್ಸೆಯನ್ನು ಕೈಕೆಟುವ ಮಟ್ಟದಲ್ಲಿ ನೀಡುತ್ತಿರುವುದು ಹರ್ಷ ತಂದಿದೆ ಎಂದು ಆಸ್ಪತ್ರೆಯ ನಿರ್ದೇಶಕರು ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ವೈದ್ಯರ ಸೇವಾಮನೋಭಾವ ಮತ್ತು ಕಾರ್ಯತತ್ಪರತೆಯನ್ನು ಮುಕ್ತವಾಗಿ ವೈದ್ಯರ ತಂಡ ಶ್ಲಾಘಿಸಿದ್ದಾರೆ.
ಮಹಾನಗರಗಳಿಗೆ ಎಡತಾಕುವಂತಿಲ್ಲ:
ಇನ್ನು ಮುಂದೆ ತುಮಕೂರು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಯ ಭಾಗದ ಜನ ಗುಣಮಟ್ಟದ ಹೃದಯ ಶಸ್ತ್ರ ಚಿಕಿತ್ಸೆಗಾಗಿ ದೂರದ ನಗರಗಳಿಗೆ ಪ್ರಯಾಣ ಮಾಡಬೇಕಾದ ಅಗತ್ಯವಿಲ್ಲ. ದಕ್ಷತೆ ಹಾಗೂ ಕೈಗೆಟಕುವ ವೆಚ್ಚದ ಮೂಲಕ ಆಧುನಿಕ ಚಿಕಿತ್ಸಾ ಸೌಲಭ್ಯ ಒದಗಿಸುತ್ತಿದೆ. ಈ ಕೇಂದ್ರವನ್ನು ಅಂತಾರಾಷ್ಟ್ರೀಯ ಗುಣಮಟ್ಟದ ಹಾಗೂ ಆಧುನಿಕ ಸೌಕರ್ಯಗಳನ್ನು ಬಡ ಜನರಿಗೆ ತಲುಪಿಸುವ ಸಂಕಲ್ಪ ಮಾಡಲಾಗಿದೆ ಎಂದು ಡಾ.ಜಿ.ಪರಮೇಶ್ವರ ಅವರ ಆಶಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕಾರ್ಡಿಯಾಕ್ ಫ್ರೊಂಟಿಟ್ ಸಂಸ್ಥೆಯ ನಿರ್ದೇಶಕ ತಮೀಮ್ ಅಹಮದ್ ಮಾತನಾಡಿ, ಇದೇ ಆಗಸ್ಟ್ ೬ರಂದು ಬ್ಲೂ ಬೇಬಿ ಸಿಂಡ್ರೋಮ್ ಹೊಂದಿದ ಬಾಲಕಿಗೆ ಉಚಿತವಾಗಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ವಿಪರ್ಯಾಸವೆಂದರೆ ಈ ಮಗುವಿಗೆ ತಾಯಿ ಇಲ್ಲ. ಅದರ ಆರೈಕೆ ಸಂಬಂಧಿಕರು ವಯಿಸಿದ್ದು, ಮಗುವು ಸಂಪೂರ್ಣವಾಗಿ ಆರೋಗ್ಯಕರವಾಗಿದೆ ಎಂದರು.
ಹಾರ್ಟ್ ಸೆಂಟರ್‌ನಲ್ಲಿ ಈವರೆಗೂ ಸುಮಾರು ೨೭ಕ್ಕೂ ಹೆಚ್ಚು ತೆರೆದ ಹೃದಯ ಶಸ್ತ್ರಚಿಕಿತ್ಸೆ, ೫೦ಕ್ಕೂ ಹೆಚ್ಚು ಆಂಜಿಯೋಪ್ಲಾಸ್ಟಿ, ಅಂಜಿಯೋಗ್ರಾಮ್ ಸೇರಿದಂತೆ ಇದುವರೆಗೂ ಸುಮಾರು ೩೦೦ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಸಿದ್ಧಾರ್ಥ ಹಾರ್ಟ್ ಸೆಂಟರ್. ಸೂಪರ್ ಸ್ಪೆ?ಲಿಟಿ ಆಸ್ಪತ್ರೆಯಾಗಿದ್ದು, 24ಗಂಟೆಗಳ ತುರ್ತುನಿಗಾ ಘಟಕ, ಪ್ರಯೋಗಾಲಯಗಳು, ವಿಕಿರಣ ಘಟಕ, ಸಿಟಿ ಸ್ಕ್ಯಾನರ್, ಎಂ.ಆರ್.ಐ ಸ್ಕ್ಯಾನರ್ ಸೌಲಭ್ಯ ಒಳಗೊಂಡಿದೆ. ಪೂರ್ಣ ಪ್ರಮಾಣದ ರೋಗಪತ್ತೆ, ಆಂಜಿಯೋಗ್ರಾಂ, ಆಂಜಿಯೋಪ್ಲಾಸ್ಟಿ, ಶಾಶ್ವತ ಪೇಸ್ಮೇಕರ್ ಅಳವಡಿಕೆ, ವಾಲ್‌ವ್ಲೋಪ್ಲಾಸ್ಟಿ ಸೌಲಭ್ಯವೂ ಲಭ್ಯವಿದೆ ಎಂದು ತಮೀಮ್ ತಿಳಿಸಿದರು.
ವೈದ್ಯರ ತಂಡ ಇಂತಿದೆ:
ಆಸ್ಪತ್ರೆಯ ಪ್ರಮುಖ ವಿಭಾಗವಾದ ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್‌ಸೆಂಟರ್’ನ ಮೇಲ್ವಿಚಾರಕರಾದ ಹಾಗೂ ಕಾರ್ಡಿಯಾಕ್ ಫ್ರಾಂಟಿಡಾ ಸಂಸ್ಥೆಯ ನಿರ್ದೇಶಕ ಡಾ.ತಮೀಮ್ ಅಹಮದ್ ನೇತೃತ್ವದ ಡಾ.ಅಬ್ದುಲ್, ಡಾ.ವಾಸುದೇವ್ ಬಾಬು, ಡಾ. ತಹೂರ್, ಡಾ.ನವೀನ್, ಡಾ.ಸುರೇಶ್, ಡಾ. ಆಶಿತ ಕಾಮತ್, ಡಾ. ನಾಗಾರ್ಜುನ, ವಿವೇಕ್, ಜಾನ್, ಡಾ. ನಿಕೀತಾ ಮತ್ತು ತಾಂತ್ರಿಕ ಸಿಬ್ಬಂದಿಯನ್ನೊಳಗೊಂಡ ತಂಡ ಶಸ್ತ್ರಚಿಕಿತ್ಸೆಯನ್ನು ಮಾಡುವಲ್ಲಿ ಸಫಲವಾಗಿದೆ ಎಂದು ಹಾರ್ಟ್ ಸೆಂಟರ್‌ನ ಸಿಇಓ ಡಾ.ಪ್ರಭಾಕರ್ ತಿಳಿಸಿದರು.
ಬ್ಲೂ ಬೇಬಿ ಸಿಂಡ್ರೋಮ್ :
ಬಾಲಕಿ ಬ್ಲೂ ಬೇಬಿ ಸಿಂಡ್ರೋಮ್ನೊಂದಿಗೆ ಜನಿಸಿದ್ದಳು. ಸಾಮಾನ್ಯ ಮಗುವಿನಂತೆ ಜನಿಸದ ಕಾರಣ ಸಾಮಾನ್ಯ ಜೀವನ ನಡೆಸಲು ಸಾಕ? ಕ?ಪಟ್ಟಿದ್ದಳು. ಅವಳ ಹೃದಯದಲ್ಲಿ ಜನ್ಮಜಾತ ದೋ?ವಿದ್ದು, ಹೃದಯವು ಆಮ್ಲಜನಕಯುಕ್ತ ರಕ್ತವನ್ನು ಪ್ರತ್ಯೇಕಿಸಲು ಸಾಧ್ಯವಾಗುತ್ತಿರಲಿಲ್ಲ. ರಕ್ತ ಶ್ವಾಸಕೋಶಕ್ಕೆ ಹೋಗಿ ಶುದ್ಧಿಯಾಗಿ ವಾಪಸ್ ಹೃದಯಕ್ಕೆ ಬಂದು ರಕ್ತನಾಳದ ಮೂಲಕ ಸಂಚರಿಸುತ್ತಿರಲಿಲ್ಲ. ಅಂದರೆ ಶುದ್ಧ ರಕ್ತ ಮತ್ತು ಅಶುದ್ಧ ರಕ್ತ (ಡೀ ಆಕ್ಸಿಜೆನೇಟೆಡ್ ರಕ್ತ )ಎರಡೂ ಒಂದೇ ಸ್ಥಳದಲ್ಲಿ ಸೇರುತ್ತಿತ್ತು. ಇದರ ಪರಿಣಾಮವಾಗಿ ದೇಹದ ಪ್ರಮುಖ ಅಂಗಗಳಿಗೆ ಅಗತ್ಯವಾದ ಆಮ್ಲಜನಕದ ಪೂರೈಕೆ ಸಾಧ್ಯವಾಗುತ್ತಿರಲಿಲ್ಲ. ಮೊದಲು ಆಕ್ಸಿಜನ್ ಪ್ರಮಾಣ ಶೇ80% ರಷ್ಟು ಕಡಿಮೆ ಇತ್ತು. ಇಂತಹ ಪರಿಸ್ಥಿತಿಯಿಂದ ಹೊರಬರಲು ಈ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಈಗ ಶೇ೯೫%ರಷ್ಟು ಆಮ್ಲಜನಕ ಪೂರೈಕೆಯಾಗುತ್ತಿದ್ದು ಸಾಮಾನ್ಯ ಸ್ಥಿತಿಗೆ ತಲುಪಿದ್ದಾಳೆ ಎಂದು ಕಾರ್ಡಿಯಾಕ್ ಫ್ರೊಂಟಿಟ್ ಸಂಸ್ಥೆಯ ನಿರ್ದೇಶಕ ತಮೀಮ್ ಅಹಮದ್ ತುಮಕೂರು ನಗರದಲ್ಲಿ ವಾಸಿಸುತ್ತಿರುವ ಈ ಆರುವರೆ ವರ್ಷದ ಬಾಲಕಿಗೆ ತಾಯಿ ಇಲ್ಲ. ಅತ್ಯಂತ ಸಂಕೀರ್ಣವಾಗಿದ್ದ ಹೃದಯ ಶಸ್ತ್ರ ಚಿಕಿತ್ಸೆ ಮಾಡಿದ್ದು, ಬಾಲಕಿಗೆ ಹೊಸ ಬದುಕು ಕಟ್ಟಿಕೊಡುವಲ್ಲಿ ವೈದ್ಯರು ಸಫಲರಾಗಿದ್ದಾರೆ.
ಹೃದಯ, ಶ್ವಾಸಕೋಶ ಶಸ್ತ್ರ ಚಿಕಿತ್ಸೆಯಲ್ಲಿ ಬಳಸುವ ಅತ್ಯಾಧುನಿಕ ಯಂತ್ರ, ವೈದ್ಯಕೀಯ ಸಾಧನಗಳನ್ನು ಬಳಸಿ ನಡೆಸಲಾದ ಅಪರೂಪದ ಶಸ್ತ್ರಚಿಕಿತ್ಸೆ ಇದಾಗಿದೆ. ಜನ್ಮತಃ ಬಂದ ನೀಲಿಗಟ್ಟುವ ಹೃದ್ರೋಗ ಬ್ಲೂ ಬೇಬಿ ಸಿಂಡ್ರೋಂ ಹೆಸರಿನ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ವೈದ್ಯಕೀಯ ಮಹಾವಿದ್ಯಾಲಯದ ಸಿಇಓ ಪಿ.ಕೆ.ಡಾ.ದೇವದಾಸ್ ಮತ್ತು ಪ್ರಾಂಶುಪಾಲರಾದ ಡಾ. ಎ.ಜಿ.ಶ್ರೀನಿವಾಸಮೂರ್ತಿ ಭಾಗವಹಿಸಿದ್ದರು.