ಸರಸ್ವತಿ , ಲಕ್ಷ್ಮಿ ಬಂಗಾರ ಹಾಕಿಕೊಂಡಿದ್ದಾರೆ. ಪಾರ್ವತಿ ತಾನು ಯಾಕೆ ಹಾಕಿಕೊಳ್ಳಬಾರದೆಂದು ಸ್ವಾಮಿ ನನಗೆ ಬಂಗಾರ
ಹಾಕಿಕೊಳ್ಳುವ ಬಯಕೆಯಾಗಿದೆ. ನನಗೆ ಅನುಗ್ರಹಿಸು ಎಂದು.
ಆಗ ಈಶ್ವರ ಒಂದು ಚಿಟಿಕೆ ಭಸ್ಮವನ್ನು ತೆಗೆದು ಪಾರ್ವತಿ ಕೈಗೆ ಕೊಟ್ಟ
ಇದೇನು ಸ್ವಾಮಿ ಬಂಗಾರ ಕೊಡಿ ಎಂದರೆ ಭಸ್ಮ ಕೊಟ್ಟಿದ್ದೀರಿ!
ನನ್ನಲ್ಲಿರುವುದು ಇದೆ. ಇದನ್ನು ತೆಗೆದುಕೊಂಡು ಹೋಗಿ ಕುಬೇರನಲ್ಲಿ ಕೇಳು ಇದರ ತೂಕದ ಬಂಗಾರ ಕೊಡುತ್ತಾನೆ ಎಂದ.
ಪಾರ್ವತಿಯು ಅದನ್ನು ಅಲಕಪುರಕ್ಕೆ (ಕುಬೇರನ ವಾಸಸ್ಥಳ) ಈ ಭಸ್ಮದ ತೂಕಕ್ಕೆ ಬಂಗಾರ ಕೊಡಬೇಕು ಎಂದು ಕೇಳಿದಳು. ಆಗ ಕುಬೇರ ನಗುತ್ತಾ ಇದಕ್ಕೆ ಏನು ತೂಕದ ಬಂಗಾರ ಕೊಡಲಾಗುತ್ತದೆ.
ನಿಮಗೆಷ್ಟು ಬೇಕು ತೆಗೆದುಕೊಳ್ಳಿ ಎಂದ.
ಇಲ್ಲ ನನಗೆ ಇದರ ತೂಕವೇ ಬೇಕು ಎಂದು ಪಾರ್ವತಿ ಕೇಳಿದಾಗ ಕುಬೇರನು ಪಾರ್ವತಿಯ ಅಣತಿಯಂತೆ, ತಕ್ಕಡಿಯಲ್ಲಿ ಭಸ್ಮವನ್ನು ಒಂದೆಡೆ ಇಟ್ಟ. ಮತ್ತೊಂದೆಡೆಗೆ
ಬಂಗಾರ ಹಾಕಿದ, ಎಷ್ಟು ಬಂಗಾರ ಹಾಕಿದರೂ ತೂಕ ಮೇಲೆಳಲಿಲ್ಲ.. ಕೊನೆಗೆ ಕುಬೇರನು ತನ್ನ ಹೆಂಡತಿಯ ಬಂಗಾರವನ್ನು ಹಾಕತೊಡಗಿದ.
ಕುಬೇರನಿಗೂ ನಾನೆಂಬ ಅಹಂ ಭಾವವಿತ್ತು ಅದಕ್ಕೆ ಹೀಗಾಯಿತು, ಕೊನೆಗೆ ಕುಬೇರನು ತನ್ನ ಹೆಂಡತಿಯ ತಾಳಿಯನ್ನು ತಕ್ಕಡಿಯಲ್ಲಿ ಹಾಕಿದ ಆಗ ತಕ್ಕಡಿ ಸ್ವಲ್ಪ ಮೇಲೇರಿತು.
ಆಗ ಕುಬೇರನು ತಾಯಿ ನಾನು ಅಹಂಕಾರದಿಂದ ನುಡಿದೆ ಕ್ಷಮಿಸಿ, ಈ ಚಿಟಿಕೆ ಭಸ್ಮವು ಎಷ್ಟು ಬಂಗಾರ ಹಾಕಿದರೂ, ಸರಿದೂಗಲಾರದು ಎಂದು
ಕೈ ಮುಗಿದ.
ಪಾರ್ವತಿ ತನ್ನ ಪತಿಯ ಭಸ್ಮದ ಮಹತ್ವವನ್ನು ಗಮನಿಸಿ, ನನಗೆ ಬಂಗಾರ ಬೇಡ “ಶಿವ ಕೊಟ್ಟ ಭಸ್ಮವೇ ಬಂಗಾರ” ಎಂದು ಧರಿಸಿಕೊಂಡಳು.
ಓಂ ನಮಃ ಶಿವಾಯ