ಬೀದರ್ : ಯಾವುದೇ ಕಾರಣಕ್ಕೂ ಉದೋಗ್ಯ ಖಾತ್ರಿ ಕೆಲಸ ತಡೆಯಬಾರದು. ಕನಿಷ್ಠ ನೂರು ದಿನ ಕೆಲಸ ಕೊಡಬೇಕು. ಗ್ರಾಮ ಪಂಚಾಯತಿಗಳಿಗೆ ಕೋಟ್ಯಾಂತರ ರೂ. ಅನುದಾನ ಬರುತ್ತದೆ. ಅದನ್ನು ಸದುಪಯೋಗ ಪಡಿಸಿಕೊಂಡು ಗ್ರಾಮಗಳನ್ನು ಅಭಿವೃದ್ಧಿ ಪಡಿಸುವ ಕೆಲಸ ಮಾಡಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬುಧೇರಾ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದ ಅವರು, ಕೆಕೆಆರ್ಡಿಬಿಯ 2020-21ನೇ ಸಾಲಿನ ಅನುದಾನದಲ್ಲಿ ಸುಮಾರು 39.80 ಲಕ್ಷ ರೂ. ಮೊತ್ತದಲ್ಲಿ ನಿರ್ಮಿಸಲಾಗುತ್ತಿರುವ ‘ಬುಧೇರಾ ಗ್ರಾಮಕ್ಕೆ ಕೂಡುವ ರಸ್ತೆ ಸುಧಾರಣೆ ಹಾಗೂ ಡಾಂಬರೀಕರಣ’ ಕಾಮಗಾರಿಗೆ ಚಾಲನೆ (ರಸ್ತೆ ಉದ್ಘಾಟನಾ ಸಮಾರಂಭ) ನೀಡಿದರು.
ಬಳಿಕ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಕೊರೊನಾ ಮಹಾಮಾರಿಯ ಹಾವಳಿಯಿಂದಾಗಿ ಜಾಸ್ತಿ ಕಡೆ ಓಡಾಡಲು ಆಗಿಲ್ಲ. ಅನೇಕ ಕಡೆಗಳಲ್ಲಿ ಸಿಸಿ ರೋಡ್ ಗಳು ಆಗಿವೆ. ಇನ್ನೂ ಅನೇಕ ಡಾಂಬರ್ ರಸ್ತೆಗಳು ಆಗಿವೆ. ಇದೀಗ ಈ ಗ್ರಾಮದ ಬಸವೇಶ್ವರ ಸರ್ಕಲ್ ನಿಂದ ಮೇನ್ ರೋಡ್ ತನ ಡಾಂಬರ್ ರಸ್ತೆ ಮಾಡಲಾಗುತ್ತಿದೆ.
ಉದ್ಯೋಗ ಖಾತ್ರಿ ಕೆಲಸ ಸೇರಿದಂತೆ ಗ್ರಾಮಗಳ ಅಭಿವೃದ್ಧಿಗೆ ಸಹಕಾರಿಯಾಗುವ ಎಲ್ಲಾ ರೀತಿಯ ಕೆಲಸಗಳನ್ನು ಮಾಡಬೇಕು. ಅಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು ಗ್ರಾಮೀಣ ಭಾಗಗಳನ್ನು ಅಭಿವೃದ್ಧಿ ಪಡಿಸುವ ಕೆಲಸ ಮಾಡಬೇಕು. ಒಂದು ಕ್ಷೇತ್ರದ ಶಾಸಕರಿಗೆ ಸಿಗುವ ಅನುದಾನಕ್ಕಿಂತ ಹೆಚ್ಚಿನ ಅನುದಾನ ಪಂಚಾಯತಿಗಳಿಗೆ ಸಿಗುತ್ತಿದೆ. ಅದನ್ನು ಸದುಪಯೋಗ ಪಡೆಸಿಕೊಳ್ಳಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಖುಷಾ ಬಾಯಿ, ವಿಶ್ವನಾಥ ಪೊಲೀಸ್ ಪಾಟೀಲ್, ಅಶೋಕ್ ರೆಡ್ಡಿ, ಸಂಗಾರೆಡ್ಡಿ ಬಿರಾದಾರ, ಗುತ್ತೆದಾರ ಸಿದ್ಧಾರ್ಥ ರಾಠೋಡ್, ಇಂಜಿನಿಯರ್ ಭಗವಾನ್ ಸಿಂಗ್, ಅಸ್ರಪ್ ಹಲಿ, ಗುಂಡಮ್ಮ, ಲಾಲಪ್ಪ, ವೀರಶೆಟ್ಟಿ, ಬಸವರಾಜ್ ಮೇತ್ರಿ, ಗಣೇಶ್ ಕೋರಿ, ಸತೀಶ್ ಮೇತ್ರಿ, ಸಚಿನ್ ರಾಠೋಡ್, ಶಿವರಾಜ್ ಕೋರಿ, ನಾಗೇಶ್, ಮಲ್ಲು, ಬಸವರಾಜ್, ಶಫಿ, ಭೀರಪ್ಪ, ಚಂದ್ರಕಾಂತ ಬುದೇರಾ, ನಾಗರತ್ನ, ನಾಗಲತಾ, ರಮೇಶ್ ಕೋರಿ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು, ಮುಖಂಡರು, ಕಾರ್ಯಕರ್ತರು ಇದ್ದರು.