ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಕರೋನಾ ಪಾಸಿಟಿವಿಟಿ ರೇಟ್ ಜಾಸ್ತಿಯಾಗುತ್ತಿರುವ ಬೆನ್ನಲ್ಲೇ ಆಗಸ್ಟ್ 03, 2021 ರಿಂದ ಜಾರಿಯಾಗುವಂತೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ. ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ತುರ್ತು ಸೇವೆಗಳಿಗೆ ಅವಕಾಶ ಬಿಟ್ಟು ಬೇರೆಲ್ಲಾ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುತ್ತಿದೆ ಎಂದು ತಿಳಿಸಿದರು.
ಏತನ್ಮಧ್ಯೆ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ದಿನೇ ದಿನೇ ಕರೋನಾ ಅಬ್ಬರ ಜಾಸ್ತಿಯಾಗಿದ್ದು, ಇದೇ ರಾಜ್ಯಕ್ಕೆ ಕಂಠಕವಾಗಿ ಪರಿಣಮಿಸಿದೆ, ಅಲ್ಲದೇ ಜನತೆಯ ನಿರ್ಲಕ್ಷ್ಯತೆ ಮತ್ತು ಸರ್ಕಾರದ ಬೇಜವಾಬ್ದಾರಿತನವೂ ಸಹ ಇದಕ್ಕೆ ಕಾರಣ ಎನ್ನಲಾಗಿದ್ದು, ಯಾವುದೇ ಸಮಯದಲ್ಲೂ ರಾಜ್ಯದಲ್ಲಿ ಕರೋನಾದ ಮೂರನೇ ಅಲೆಯ ಅಬ್ಬರ ಜೋರಾಗಿ ಪರಿಣಮಿಸಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.
ಕೆಲವರ ಬೇಜವಾಬ್ದಾರಿತನದಿಂದ ಅಮಯಾಕರ ಜೀವಗಳು ಹೋಗುತ್ತಿರುವುದು ಮಾತ್ರ ಕಟು ಸತ್ಯವಾಗಿದೆ, ಯಾವುದಕ್ಕೂ ಪ್ರತಿಯೊಬ್ಬ ಜನರೂ ತಮ್ಮ ಜಾಗ್ರತೆಯಲ್ಲಿರುವುದು ಒಳ್ಳೆಯದು. ಕರೋನಾ ಬಗ್ಗೆ ಭಯ ಬೇಡ – ಜಾಗೃತಿ ಇರಲಿ ಎಂಬ ವಾಖ್ಯಕ್ಕಿಂತ ಸುರಕ್ಷತೆಯೇ ಸುದೈವ ಎಂಬುದನ್ನು ಅರಿತು ನಡೆಯೋಣ.