ತಿರುಪತಿ ವೆಂಕಟರಮಣನಿಗಿಂತ ಎತ್ತರದ ವೆಂಕಟರಮಣ

ನಾವೆಲ್ಲಾ ಆಳೆತ್ತರದ ತಿರುಪತಿಯ ಬಾಲಾಜಿಯನ್ನು ನೋಡಿದ್ದೇವೆ ಈ ವಿಗ್ರಹದ ಎತ್ತರ 9.9 ಆದರೆ ಮಹಾರಾಷ್ಟ್ರದ ಪೈಗಂಗಾ ನದಿಯ ದಡದಲ್ಲಿ ಮೆಹೇಕರ್ ಎಂಬ ಗ್ರಾಮದಲ್ಲಿ 11 ಅಡಿಯಷ್ಟು ಎತ್ತರದ ಬಾಲಾಜಿ ವಿಗ್ರಹವಿದೆ. ಎತ್ತರವಷ್ಟೇ ಅಲ್ಲ ತುಂಬಾ ವಿಶಿಷ್ಟ ಕೆತ್ತನೆಗಳನ್ನು ಒಳಗೊಂಡಿದೆ. ಈ ಒಂದೇ ವಿಗ್ರಹದಲ್ಲಿ 19 ಮೂರ್ತಿಗಳನ್ನು ನೋಡಬಹುದು, ಮುಖ್ಯವಾಗಿ ಮಧ್ಯದಲ್ಲಿ ವೆಂಕಟರಮಣಸ್ವಾಮಿ ಸ್ವಾಮಿಯ ಪಾದದ ಬಳಿ ಪತ್ನಿಯರಾದ ಭೂದೇವಿ ಹಾಗೂ ಲಕ್ಷೀ ಯರ ವಿಗ್ರಹಗಳು ಹಾಗೂ ಜಯ ವಿಜಯರ ವಿಗ್ರಹಗಳು ಹಾಗೂ ಪ್ರಭಾವಳಿಯಲ್ಲಿ ದಶಾವತಾರಗಳೂ ಹಾಗೂ ಬ್ರಹ್ಮ, ಶಿವನ ವಿಗ್ರಹಗಳು ಹಾಗೂ ವೆಂಕಟರಮಣಸ್ವಾಮಿಯ ಕಿರೀಟವನ್ನೂ ಕಲ್ಲಿನಲ್ಲಿ ಕೆತ್ತಲಾಗಿದ್ದು ಆ ಕಿರೀಟದಲ್ಲಿ ಸಹ ಸಾರಂಗಧರ ವಿಷ್ಣುವನ್ನು ಕೆತ್ತಲಾಗಿದೆ. ಹಾಗೂ ಕಿರೀಟದ ಮೇಲಿನ ಪ್ರಭಾವಳಿಯಲ್ಲಿ ಸಹ ಒಂದು ವಿಷ್ಣು ವಿಗ್ರಹ ಕೆತ್ತಲಾಗಿದೆ.
ಅಲ್ಲಿಗೆ ಈ ವಿಗ್ರಹದಲ್ಲಿ ಒಟ್ಟು 19 ಮೂರ್ತಿಗಳನ್ನು ಈ ವಿಗ್ರಹ ನಯನ ಮನೋಹರ ಹಾಗೂ ಈ ಬಾಲಾಜಿಯ ಮಂದಸ್ಮಿತವದನ ನಮಗೆ ಬೇರೆಲ್ಲೂ ಕಾಣಸಿಗುವುದಿಲ್ಲ ಹಾಗೂ ಈ ಬಾಲಾಜಿ ಬಲಗೈ ಯಲ್ಲಿ ಕಮಲ ಹಾಗೂ ಗದೆ ಎಡಗೈಯಲ್ಲಿ ಚಕ್ರ ಹಾಗೂ ಶಂಖ ಹಿಡಿದಿದ್ದಾನೆ.

ಈ ಸುಂದರ ಬಾಲಾಜಿ ವಿಗ್ರಹದ ಹಿಂದೆ ಒಂದು ಐತಿಹ್ಯ ಇದೆ, ರೋಚಕ ಹಾಗೂ ತ್ಯಾಗದ ಕಥೆಯಿದೆ

ಬಹಳ ಹಿಂದೆ ಮೇಘಂಕರ ಎಂಬ ರಾಕ್ಷಸ ಈ ಪ್ರಾಂತ್ಯದ ಜನರಿಗೆ ತೊಂದರೆ ಕೊಡುತ್ತಿದ್ದನಂತೆ ವಿಷಯ ತಿಳಿದ ವಿಷ್ಣುವು ಸಾರಂಗಧರ ಎಂಬ ಬಿಲ್ಲಿನಿಂದ ಆತನನ್ನು ಸಂಹರಿಸಿದನಂತೆ ಕಡೆಗಳಿಗೆಯಲ್ಲಿ ಮೇಘಂಕರನು ವಿಷ್ಣುವನ್ನು ಹೀಗೆ ವಿನಂತಿಸಿಕೊಳ್ಳುತ್ತಾನೆ. ನಿಮ್ಮ ಕೈಯಲ್ಲಿ ಮರಣ ಹೊಂದುತ್ತಿರವುದು ನನಗೆ ಸಂತೋಷ ತಂದಿದೆ. ಆದರೆ ಈ ಸ್ಥಳ ನನ್ನ ಹೆಸರಿನಿಂದ ಕರೆಯಲ್ಪಡಲಿ ಹಾಗೂ ನೀನು ಸಾರಂಗಧರದಿಂದ ನನ್ನನ್ನು ಸಂಹರಿಸಿದ್ದಕ್ಕಾಗಿ ನೀನು ಸಾರಂಗಧರನಾಗಿ ಇಲ್ಲಿಯೇ ನೆಲೆಸು.
ಆ ಪ್ರಕಾರ ಈ ಸ್ಥಳವನ್ನು ಮೇಘಂಕರ ಎಂದು ಕರೆಯುತ್ತಿದ್ದು ಈಗ ಜನರ ಬಾಯಲ್ಲಿ ಮೆಹೇಕರ್ ಆಗಿ ಬಿಟ್ಟಿದೆ. ಆತನ ಕೋರಿಕೆಯಂತೆ ವಿಷ್ಣುವು ಸಾರಂಗಧರನಾಗಿ ಇಲ್ಲಿ ನೆಲೆಸಿ ಪೂಜೆಗಳನ್ನು ಕೈಗೊಳ್ಳತ್ತಿದ್ದ. ಇಂದಿಗೂ ನಾವು ಈ ಮೂರ್ತಿಯ ಕಿರೀಟದಲ್ಲಿ ಸಾರಂಗಧರನಾದ ವಿಷ್ಣುವಿನ ಕೆತ್ತನೆ ನೋಡಬಹುದು. ಹೀಗಿರುವಾಗ ಒಮ್ಮೆ 1295ರಲ್ಲಿ ಅಲ್ಲಾವುದ್ದೀನ್ ಖಿಲ್ಜಿ ದೇವಗಿರಿಯಿಂದ ಆಳುತ್ತಿದ್ದ ಕಾಲ ಆತನ ದೇವಗಿರಿಯಿಂದ ಹೊರಟು ಸಿಕ್ಕ ಸಿಕ್ಕ ಊರುಗಳಲ್ಲಿ ದೇಗುಲಗಳನ್ನು ನಾಶ ಮಾಡುತ್ತಾ ಬರುತ್ತಿದ್ದನಂತೆ ಈ ವಿಷಯ ತಿಳಿದ ಮೆಹೇಕರ್ ಗ್ರಾಮಸ್ಥರು ಈ ಸುಂದರ ಬಾಲಾಜಿ ವಿಗ್ರಹವನ್ನು ಆತನಿಗೆ ಸಿಗದಂತೆ ಬಚ್ಚಿಡುತ್ತಾರೆ. ಕಾಲಾಂತರದಲ್ಲಿ ಈ ವಿಷಯ ಎಲ್ಲರ ಗಮನದಿಂದ ಮರೆಯಾಗಿಬಿಟ್ಟಿರುತ್ತದೆ. ಆದರೆ 1888 ರಲ್ಲಿ ಆ ಗ್ರಾಮದ ರೈತರೊಬ್ಬರು ಹೊಲ ಹಸನು ಮಾಡುವಾಗ ಅವರಿಗೆ ಒಂದು 20 ಅಡಿಯ ಲೋಹದ ಪೆಟ್ಟಿಗೆ ಸಿಗುತ್ತದೆ. ಕುತೂಹಲದಿಂದ ಅದನ್ನು ತೆರೆದ ಗ್ರಾಮಸ್ಥರಿಗೆ ಚಂದನದಲ್ಲಿ ಹುದುಗಿಸಿಟ್ಟ ಸುಂದರ ಕರಿಕಲ್ಲಿನ ಬಾಲಾಜಿ ವಿಗ್ರಹ ಕಾಣುತ್ತದೆ. ಜೊತೆಗೆ ಎರಡು ತಾಮ್ರದ ಹಾಳೆಗಳು ಸಿಗುತ್ತದೆ. ಹಾಗೂ ಆಭರಣಗಳು ಸಹ ಇರುತ್ತವೆ. ಆ ತಾಮ್ರದ ಹಾಳೆಗಳಿಂದ ಈ ವಿಗ್ರಹದ ವೃತ್ತಾಂತ ಗ್ರಾಮಸ್ಥರಿಗೆ ತಿಳಿಯುತ್ತದೆ. ಈ ಸುಂದರ ವಿಗ್ರಹ ನೋಡಲು ಜನ ಸಾಗರೋಪಾದಿಯಲ್ಲಿ ಮೆಹೇಕರ್ ಗೆ ಬರುತ್ತಾರೆ. ಆಗ ಆಂಗ್ಲರ ಆಳ್ವಿಕೆ ಇದ್ದುದರಿಂದ ಅವರೂ ಓಡೋಡಿ ಬಂದು ಎಲ್ಲವನ್ನೂ ವಶಕ್ಕೆ ತೆಗೆದು ಕೊಂಡು ಅವರ ದೇಶಕ್ಕೆ ಕಳುಹಿಸಲು ಪ್ರಯತ್ನಿಸುತ್ತಾರೆ. ಇದನ್ನರಿತ ಗ್ರಾಮಸ್ಥರು ರಾತ್ರೋ ರಾತ್ರಿ ಬಾಲಾಜಿ ವಿಗ್ರಹವನ್ನು ಪ್ರತಿಷ್ಠೆ ಮಾಡಿಬಿಡುತ್ತಾರೆ. ಇದರಿಂದಾಗಿ ಕೋಪಗೊಂಡ ಬ್ರಿಟಿಷರು ಆ ಊರಿನ 60 ಜನರನ್ನು ಬಂಧಿಸಿ ಕೊಡಬಾರದ ಹಿಂಸೆ ಕೊಡುತ್ತಾರೆ ಅದರಲ್ಲಿ ಕೆಲ ರು ಪ್ರಾಣವನ್ನೂ ಕಳೆದುಕೊಳ್ಳುತ್ತಾರೆ.
ನಂತರ 1913ರಲ್ಲಿ ಪ್ರಹ್ಲಾದ ಮಹರಾಜ್ ಅನ್ನುವವರು ಸಾಂಗವಾಗಿ ಈ ಮೂರ್ತಿಗೆ ಫುನರ್ ಪ್ರಾಣ ಪ್ರತಿಷ್ಠೆ ಮಾಡಿ ಈ ದೇಗುಲ ನಿರ್ಮಾಣಕ್ಕೆ ಕಾರಣವಾಗುತ್ತಾರೆ. ಸಂಪೂರ್ಣವಾಗಿ ದೇವದಾರು ಮರದಿಂದ ಕಟ್ಟಲ್ಪಟ್ಟಿರುವ ಈ ದೇಗುಲ ಸುವಿಶಾಲವಾಗಿದೆ, ಸುಂದರವಾಗಿದೆ ಹೊರ ಆವರಣದಲ್ಲಿ ಶಿಲ್ಪಕಲೆಯನ್ನೂ ಕಾಣಬಹುದು.

ಈ ಮೂರ್ತಿಯಲ್ಲಿ ಬ್ರಹ್ಮ, ವಿಷ್ಣು, ಶಿವ ಮೂರೂ ಮೂರ್ತಿಗಳೂ ಇರುವುದರಿಂದ ಈ ಮೂರ್ತಿಯನ್ನು ತ್ರಿವಿಕ್ರಮ ಬಾಲಾಜಿ ಎಂದೂ ಕರೆಯುತ್ತಾರೆ.

Leave a Reply

Your email address will not be published. Required fields are marked *

error: Content is protected !!