ಮೈಸೂರಿನ ಕುರುಬರಹಳ್ಳಿಯಲ್ಲಿರುವ 1561.31 ಎಕರೆ ಜಮೀನು ಮೈಸೂರು ಅರಸರಿಗೇ ಸೇರಿದ್ದು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಈ ಭೂಮಿಯನ್ನು ವಶಪಡಿಸಿಕೊಂಡಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಅಸಿಂಧುಗೊಳಿಸಿದೆ. ಈ ಜಮೀನು ಮೂಲವಾಗಿ ಮೈಸೂರು ಅರಸರಿಗೇ ಸೇರಿದ್ದಾಗಿದೆ ಎಂದು ರಾಜ್ಯ ಹೈಕೋರ್ಟ್ ನೀಡಿದ್ದ ತೀರ್ಪನ್ನು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ಪ್ರ ಶ್ನಿ ಸಿ ತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಉದಯ್ ಲಲಿತ್ ಮತ್ತು ನ್ಯಾ. ಅಜಯ್ ರಸ್ತೋಗಿ ನೇತೃತ್ವದ ದ್ವಿಸದಸ್ಯ ಪೀಠ, ಈ ಭೂಮಿಯನ್ನು ಮೈಸೂರು ರಾಜ ಮನೆತನದವರಿಂದ ವಿವಿಧ ವ್ಯಕ್ತಿಗಳು ಖರೀದಿಸಿದ ಎಷ್ಟೋ ದಶಕಗಳ ಬಳಿಕ ಸರ್ಕಾರ ನಿ ದ್ರಾ ಸ್ಥಿತಿಯಿಂದ ಎದ್ದು ಕುಳಿತರೆ ಏನೂ ಮಾಡಲಾಗುವುದಿಲ್ಲ. ಹೀಗಾಗಿ, ಈ ಭೂಮಿ ಖರೀದಿದಾರರಿಗೆ ಸೇರಬೇಕು ಎಂಬ ವಾ ದ ವನ್ನು ಎತ್ತಿಹಿಡಿದಿದೆ. ಖರೀದಿದಾರರ ಪರವಾಗಿ ಸುಪ್ರೀಂಕೋರ್ಟ್ ವಕೀಲ ನಿಶಾಂತ್ ಪಾಟಿಲ್ ವಾದಿಸಿದ್ದರು.
ಕುರುಬರಹಳ್ಳಿಯಲ್ಲಿರುವ ಈ ಭೂಮಿಯನ್ನು ಖರಾಬ್ ಜಮೀನು ಎಂದು 2015ರಲ್ಲಿ ಆದೇಶಿಸಿದ್ದ ಜಿಲ್ಲಾಧಿಕಾರಿ ಕ್ರಮವನ್ನು ರಾಜ್ಯ ಹೈಕೋರ್ಟ್ ವ ಜಾ ಗೊ ಳಿ ಸಿ, ಇದು ಖರೀದಿದಾರರಿಗೆ ಸೇರಬೇಕು ಎಂದು ತಿಳಿಸಿತ್ತು. ಇದರಿಂದ ಅ ಸ ಮಾ ಧಾ ನ ಗೊಂಡಿದ್ದ ಸರ್ಕಾರ, ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿ, ಭೂಮಿಯನ್ನು ತನ್ನ ವ ಶ ಕ್ಕೆ ಪಡೆದುಕೊಳ್ಳುವ ಕಾ ನೂ ನು ಹೋ ರಾ ಟ ಕ್ಕೆ ಮುಂದಾಗಿತ್ತು. ಆದರೆ, ಸುಪ್ರೀಂಕೋರ್ಟ್ ನಲ್ಲೂ ಸರ್ಕಾರಕ್ಕೆ ಹಿ ನ್ನ ಡೆ ಯಾಗಿರುವುದರಿಂದ ಒಂದೂವರೆ ಸಾವಿರ ಎಕರೆ ಮೇಲಿನ ತನ್ನ ನಿ ಯಂ ತ್ರ ಣ ವನ್ನು ಕ ಳೆ ದು ಕೊಂಡಂತಾಗಿದೆ.
ರಾಜ್ಯ ಸರ್ಕಾರದ ಪರ ವಾ ದಿ ಸಿ ದ ಹಿರಿಯ ವಕೀಲ ರಂಜಿತ್ ಕುಮಾರ್, 1881-1883ರಲ್ಲಿ ಬ್ರಿಟಿಷ್ ಸರ್ಕಾರ ನಡೆಸಿದ್ದ ಸಮೀಕ್ಷೆಯಲ್ಲಿ ಕುರುಬರಹಳ್ಳಿ ಗ್ರಾಮದಲ್ಲಿನ ಭೂಮಿಯನ್ನು ಬಿ-ಖರಾಬ್ ಭೂಮಿ ಎಂದು ವರ್ಗೀಕರಿಸಲಾಗಿತ್ತು ಮತ್ತು 1921ರಲ್ಲಿ ಮತ್ತೊಮ್ಮೆ ನಡೆಸಲಾದ ಸಮೀಕ್ಷೆಯಲ್ಲೂ ಇದನ್ನು ಖರಾಬ್ ಭೂಮಿ ಎಂದು ವರ್ಗೀಕರಿಸಲಾಯಿತು ಎಂದು ವಿವರಣೆ ನೀಡಿದರು. ಆದರೆ, ಸುಪ್ರೀಂಕೋರ್ಟ್ ಈ ವಾ ದ ಕ್ಕೆ ಮಾನ್ಯತೆ ನೀಡಿಲ್ಲ. ಸಿದ್ದರಾಮಯ್ಯ ಕಳೆದ ಹಲವಾರು ವರ್ಷಗಳಿಂದ (ಜೆಡಿಎಸ್ ನಲ್ಲಿದ್ದಾಗಿನಿಂದಲೇ) ಮೈಸೂರು ಅರಸರ ಭೂಮಿಯನ್ನು ಸರ್ಕಾರಕ್ಕೆ ನೀಡಬೇಕು ಅದು ಅವರ ಆ ಸ್ತಿ ಯಾಗಲ್ಲ ಅಂತ ವಾ ದ ಮಾಡುತ್ತಲೇ ಬಂದಿದ್ದರು. ಅವರ ಸರ್ಕಾರವಿದ್ದಾಗಲೂ ಈ ವಿಷಯ ಮತ್ತಷ್ಟು ಬ ಲ ಪಡೆದುಕೊಂಡಿತ್ತು. ಈಗ ಸಿದ್ದರಾಮಯ್ಯಗೂ ಭಾರೀ ಮು ಖ ಭಂ ಗ ವಾದಂತಾಗಿದೆ.
71 ವರ್ಷಗಳ ಹಿಂದಿನ ಒ ಪ್ಪಂ ದ: 1950ರಲ್ಲಿ ಭಾರತ ಸರ್ಕಾರ ಮತ್ತು ಮೈಸೂರು ಮಹಾರಾಜರ ನಡುವೆ ಈ ಜಮೀನು ಸ್ವಾ ಧೀ ನ ಕುರಿತ ಒಂದು ಒಪ್ಪಂದವೇರ್ಪಟ್ಟಿತ್ತು. ಅದರ ಪ್ರಕಾರವಾಗಿ, 1561.31 ಎಕರೆ ಜಮೀನು ಮಹಾರಾಜರಿಗೆ ಸೇರುತ್ತದೆ ಎಂಬುದನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿತ್ತು. ಹೀಗಾಗಿ, ನಂತರದ ವರ್ಷಗಳಲ್ಲಿ ಜಮೀನನ್ನು ಒಂದೊಂದೇ ಖರೀದಿದಾರರಿಗೆ ಮಾರಾಟ ಮಾಡಲು ಮಹಾರಾಜರ ಮನೆಯವರು ಮುಂದಾಗಿದ್ದರು. 1880-83ರ ಮೂಲ ಸಮೀಕ್ಷೆಯಲ್ಲಿ, ಕುರುಬರಹಳ್ಳಿ ಗ್ರಾಮದಲ್ಲಿ ಒಟ್ಟು 152 ಸಮೀಕ್ಷೆ ಸಂಖ್ಯೆಗಳನ್ನು ರಚಿಸಲಾಗಿದೆ. ಕುರುಬರಹಳ್ಳಿ ಗ್ರಾಮದ ಒಟ್ಟು ವಿಸ್ತೀರ್ಣ 1580 ಎಕರೆ 32 ಗುಂಟೆಗಳು. 1580.32 ಎಕರೆಯಲ್ಲಿ 973 ಎಕರೆ ಮತ್ತು 14 ಗುಂಟಾಗಳನ್ನು ಖರಾಬ್ – ಬಿ ಎಂದು ವರ್ಗೀಕರಿಸಲಾಗಿತ್ತು.
ಭೂಮಿಯಲ್ಲೀಗ ಏನಿವೆ?: ಈ ಜಮೀನಿನ ವ್ಯಾಪ್ತಿಯಲ್ಲಿ ಕೆ ರೆ ಗಳು, ಅ ರ ಣ್ಯ ಪ್ರದೇಶ, ಲಲಿತಮಹಲ್ ಅರಮನೆ, ಹೆಲಿಪ್ಯಾಡ್, ರಸ್ತೆಗಳು, ಉದ್ಯಾನವನಗಳು, ಮೃ ಗಾ ಲ ಯ, ರೇಸ್ ಕೋರ್ಸ್, ರಾಜ್ಯ ಆಡಳಿತ ತರಬೇತಿ ಸಂಸ್ಥೆ, ಸರ್ಕಾರಿ ಶಾಲೆಗಳು, ಕಾಲೇಜುಗಳು, ಅಂಗನವಾಡಿ ಕೇಂದ್ರಗಳು ಮುಂತಾದವುಗಳಿವೆ. ಆದರೆ, ಇವೆಲ್ಲವನ್ನೂ ಸರ್ಕಾರ ಖರಾಬ್ ಬಿ ಭೂಮಿ ಎಂದು ವರ್ಗೀಕರಿಸಿತ್ತು. ಈ ವರ್ಗೀಕರಣವನ್ನು ಖರೀದಿದಾರರು ಒಪ್ಪಿಕೊಳ್ಳಲಿಲ್ಲ ಮತ್ತು ಸುಪ್ರೀಂಕೋರ್ಟ್ ಕೂಡ ಸರ್ಕಾರದ ಕ್ರ ಮ ತ ಳ್ಳಿ ಹಾ ಕಿ ದೆ.
ಖರೀದಿದಾರರು ಏನು ವಾ ದಿ ಸಿ ದ್ದ ರು?: ಭಾರತ ಸರ್ಕಾರದ ಜತೆಗಿನ ಒಪ್ಪಂದದಂತೆ ಮೈಸೂರಿನ ಮಹಾರಾಜರು ಆಸ್ತಿಯ ಏಕೈಕ ಮಾಲೀಕರು ಎಂದು ವ್ಯಾಖ್ಯಾನಕ್ಕೆ ಇಲ್ಲಿ ಅವಕಾಶವಿಲ್ಲ. ರಾಜ್ಯ ಅಥವಾ ಇತರ ಸಕ್ಷಮ ಪ್ರಾಧಿಕಾರಗಳ ಗಮನಕ್ಕೆ ತಾರದೆಯೇ ಅವರು ಯಾರಿಗೆ ಬೇಕಾದರೂ ಇದನ್ನು ಮಾರಾಟ ಮಾಡಬಹುದು.