ತುಮಕೂರು : ಸುಮಾರು ಒಂದೂವರೆ ವರ್ಷಗಳ ಕಾಲ ಕೋವಿಡ್ ಸಂಕ್ರಾಮಿಕದಿಂದಾಗಿ ಜನಜೀವನದ ಎಲ್ಲಾ ವಲಯಗಳೂ ಸಂಕಷ್ಟ ಪರಿಸ್ಥಿತಿಗೊಳಗಾಗಿ ಭವಿಷ್ಯದ ಬಗೆಗಿನ ಆತಂಕ ಮತ್ತು ಭಯ ಮೂಡಿದ್ದು ಭರವಸೆಗಳೂ ಇಲ್ಲದಂತಾಗಿತ್ತು. ಎಲ್ಲಾ ಉದ್ಯಮಗಳೂ ಉತ್ಪಾದನೆ ಕಡಿತ, ಉದ್ಯೋಗ ಕಡಿತ, ಆರ್ಥಿಕ ಹಿನ್ನಡೆ ಅನುಭವಿಸಿದವು ಆದರೆ ಶೈಕ್ಷಣಿಕ ಸಂಸ್ಥೆಗಳಿಗೆ ವಿಶೇಷವಾಗಿ ವೃತ್ತಿಪರ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಣ ಪ್ರಾಯೋಗಿಕ ತರಬೇತಿ ಮತ್ತು ಪದವೀಧರರಿಗೆ ಭವಿಷ್ಯ ಭರವಸೆಯ ಉದ್ಯೋಗಾವಕಾಶಗಳನ್ನು ಒದಗಿಸುವ ಜವಾಬ್ದಾರಿ ಎಲ್ಲವೂ ಇದ್ದವು. ಇಂತಹ ಸಂದಿಗ್ದ ಮತ್ತು ಸಂಕ್ರಮಣ ಕಾಲದಲ್ಲಿ ಶ್ರೀದೇವಿ ಇಂಜೀನಿಯರಿಂಗ್ ಕಾಲೇಜು ಅನ್‌ಲೈನ್ ಮೂಲಕ ವ್ಯಾಸಂಗ ಪ್ರತಿ ವಿಷಯವನ್ನು ತಪ್ಪದೆ ತನ್ನ ಉತ್ತಮ ಬೋಧಕ ವರ್ಗದಿಂದ ಬೋಧಿಸಿ ಉದ್ಯೋಗ ತರಬೇತಿಯನ್ನು ಒದಗಿಸಿದ್ದು ಪದವಿ ಹೊಂದಿದ ವಿದ್ಯಾರ್ಥಿಗಳಿಗೆ ವರದಾನ ಪರಿಣಮಿಸಿತು. ಎಂದಿನಂತೆ ಐಟಿ ದಿಗ್ಗಜರಾದ ಟಿ.ಸಿ.ಎಸ್., ಇನ್ಪೋಸಿಸ್, ವಿಪ್ರೋ, ಅಕ್ಸೆಂಚರ್, ಮೈಂಡ್ ಟ್ರಿ, ಕಾಗ್ನಿಸೆಂಟ್, ಕ್ಯಾಪ್‌ಜೆಮಿನಿ ಬಾಷ್ ನಂತಹ ಕಂಪನಿಗಳು ಲಾಕ್‌ಡೌನ್ ಕಾಲದಲ್ಲೂ ನೇಮಕಾತಿ ಪ್ರಕ್ರಿಯೆಯನ್ನು ಅತ್ಯುತ್ತಮವಾಗಿ ನಿರ್ವಹಿಸಿದವು.
ಇದರ ಪ್ರಯೋಜನವನ್ನು ಸಮರ್ಥವಾಗಿ ಬಳಸಿಕೊಂಡ ಶ್ರೀದೇವಿ ಇಂಜೀನಿಯರಿಂಗ್ ಕಾಲೇಜು ತನ್ನ ಶೇಕಡಾ 90 ರಷ್ಟು ವಿದ್ಯಾರ್ಥಿಗಳಿಗೆ ಅತ್ಯುತ್ತಮ ವೇತನದ ಸಾಫ್ಟ್‌ವೇರ್ ಉದ್ಯೋಗಗಳನ್ನು ಕೊಡಿಸಲು ಯಶಸ್ವಿಯಾಗಿದೆ. ಇದರಲ್ಲಿ ಶೇಕಡಾ 10 ರಷ್ಟು ವಿದ್ಯಾರ್ಥಿಗಳಿಗೆ ಎರಡು ಅಥವಾ ಅದಕ್ಕಿಂತಲೂ ಹೆಚ್ಚು ಕಂಪನಿಗಳ ಉದ್ಯೋಗ ನೇಮಕಾತಿ ಲಭ್ಯವಾಗಿದೆ. ಉತ್ತಮ ವೇತನವಾದ ವಾರ್ಷಿಕ 6.50 ಲಕ್ಷ ಉದ್ಯೋಗವನ್ನು ಇಬ್ಬರು ವಿದ್ಯಾರ್ಥಿಗಳು ಪಡೆದು ಕೊಂಡಿದ್ದಾರೆ. ವಾರ್ಷಿಕ 4.50 ಲಕ್ಷ ವೇತನದ ಉದ್ಯೋಗಗಳನ್ನು 12 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ಬಹುತೇಕ ವಿದ್ಯಾರ್ಥಿಗಳು ವಾರ್ಷಿಕ 3.5 ಲಕ್ಷ ವೇತನದ ಉದ್ಯೋಗಗಳನ್ನು ಗಳಿಸಿಕೊಂಡಿದ್ದಾರೆ. ಹಾಗೂ ಇನ್ನೂ ಅನೇಕ ಕಂಪನಿಗಳಲ್ಲಿ ಹಲವಾರು ನೇಮಕಾತಿ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿದ್ದು ಇನ್ನೂ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸಿ ಕೊಡಲಾಗುವುದೆಂದು ಶ್ರೀದೇವಿ ಮಾನವ ಸಂಪನ್ಮೂಲ ಮತ್ತು ಮಾಹಿತಿ ತಂತ್ರಜ್ಞಾನ ನಿರ್ದೇಶಕರಾದ ಎಂ.ಎಸ್.ಪಾಟೀಲ್‌ರವರು ತಿಳಿಸಿದ್ದಾರೆ.
ಗ್ರಾಮೀಣ ಭಾಗಗಳಿಂದ ಬಂದು ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಉತ್ತಮ ತರಬೇತಿ ಪಡೆದು ತಲಾ 6 ಕ್ಕಿಂತ ಹೆಚ್ಚು ಕಂಪನಿಗಳ ಉದ್ಯೋಗಾವಕಾಶಗಳನ್ನು ಪಡೆದ ವಿದ್ಯಾರ್ಥಿಗಳಾದ ಉದಯ್ ಮತ್ತು ಕೃಪಾಂಕ್‌ರನ್ನು ಕಾಲೇಜಿನ ಆಡಳಿತ ಮಂಡಳಿ ವತಿಯಿಂದ ಜುಲೈ 30 ರಂದು ಸನ್ಮಾನಿಸಲಾಗಿತ್ತು. ಈ ವಿದ್ಯಾರ್ಥಿಗಳ ಸಾಧನೆಯೂ ಇತರೆ ಎಲ್ಲಾ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.
ಸತತವಾಗಿ ತರಬೇತಿಯನ್ನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಒದಗಿಸಿಕೊಡಲು ಎಲ್ಲಾ ವ್ಯವಸ್ಥೆಗಳನ್ನು ಕೈಗೊಂಡಿರುವುದಾಗಿ ಶ್ರೀದೇವಿ ಇಂಜೀನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ನರೇಂದ್ರ ವಿಶ್ವನಾಥ್‌ರವರು ತಿಳಿಸಿದ್ದಾರೆ. ಪ್ರತಿವರ್ಷಕ್ಕಿಂತಲೂ ಹೆಚ್ಚಿನ ಕಂಪನಿಗಳನ್ನು ಕಾಲೇಜಿಗೆ ಕರೆ ತಂದು ಹೆಚ್ಚಿನ ಉದ್ಯೋಗ ಲಭ್ಯತೆಯ ಅವಕಾಶಗಳನ್ನು ಹೆಚ್ಚಿಸಲು ಶ್ರಮಿಸಲಾಗುತ್ತಿದೆಯೆಂದು ಉದ್ಯೋಗ ಮತ್ತು ತರಬೇತಿ ಅಧಿಕಾರಿಯಾದ ಎಂ.ಅಂಜನ್‌ಮೂರ್ತಿರವರು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಇವರನ್ನು ಮೊ.ನಂ. 9448118627 ರವರನ್ನು ಸಂಪರ್ಕಿಸಬಹುದಾಗಿದೆ. ಉದ್ಯೋಗ ಪಡೆದು ಯಶಸ್ವಿಯಾಗಿ ವ್ಯಾಸಂಗ ಮುಗಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಶ್ರೀದೇವಿ ಛಾರಿಟಬಲ್ ಟ್ರಸ್ಟ್‌ನ ಮುಖ್ಯಸ್ಥರಾದ ಡಾ.ಎಂ.ಆರ್.ಹುಲಿನಾಯ್ಕರ್ ರವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.