ಕೊರೋನಾ ಸಾವಿಗೀಡಾದ ವ್ಯಕ್ತಿಗಳಿಗೆ ಸರ್ಕಾರ ಘೋಷಿಸಿರುವ ಅನುದಾನ ಆಕಾಶದ ಚುಕ್ಕಿ ಆಗಿದೆ ಆದರೆ ತುಮಕೂರು ಗ್ರಾಮಾಂತರ ಶಾಸಕರಾದ ಡಿಸಿ ಗೌರಿಶಂಕರ್ ಅವರು ಕರೋನ ಸೊಂಕಿನಿಂದ ಸಾವಿಗೀಡಾದ ಕುಟುಂಬಕ್ಕೆ ನೆರವಾಗಿದ್ದಾರೆ.
ಸರಕಾರದ ಅನುದಾನವನ್ನು ಅಭಿವೃದ್ಧಿ ಮಾಡದೇ ಇರುವ ಎಷ್ಟೋ ಶಾಸಕರನ್ನು ನೋಡಿದ್ದೇವೆ ಆದರೆ ಸ್ವಂತ ಅಣ್ಣ ತಮ್ಮಂದಿರು ಅಕ್ಕ ತಂಗಿಯರಂತೆ ನೋಡುತ್ತಿರುವ ಕಾಣುತ್ತಿರುವ ತುಮಕೂರು ಗ್ರಾಮಾಂತರ ಶಾಸಕ ಡಿ ಸಿ ಗೌರಿಶಂಕರ್ ರವರು ಕೊರೋನಾದಿಂದ ಸಾವನ್ನಪ್ಪಿರುವ ಕುಟುಂಬಗಳಿಗೆ ಕೈಲಾದ ಸಹಾಯ ಮಾಡುತ್ತಾ ಅವರ ಮನಸ್ಸಿಗೆ ಧೈರ್ಯ ತುಂಬುತ್ತಾ ಎಷ್ಟೋ ಕಷ್ಟಸುಖಗಳಿಗೆ ಆಗಿರುವ ನಾಯಕ ಡಿ ಸಿ ಗೌರಿಶಂಕರ್ ಅವರು.
ತುಮಕೂರು ಗ್ರಾಮಾಂತರ ಹೆಬ್ಬೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ದಾರಸಹಳ್ಳಿ ಹೊಸಪಾಳ್ಯದ ಮಹಿಳೆಯ ಗಂಡ ಕರೋನ ಸಾವಿಗೀಡಾದ ವಿಷಯವನ್ನು ಸ್ಥಳೀಯ ಜೆಡಿಎಸ್ ಕಾರ್ಯಕರ್ತರು ಶಾಸಕರ ಗಮನಕ್ಕೆ ತಂದಾಗ ಮಹಿಳೆಯ ಕಷ್ಟಕ್ಕೆ ಹತ್ತು ಸಾವಿರ(10,000)ಧನ ಸಹಾಯ ಮಾಡಿ ಇಬ್ಬರ ಮಕ್ಕಳ ವಿದ್ಯಾಬ್ಯಾಸದ ಜವಬ್ದಾರಿಯನ್ನು ಶಾಸಕರು ಹೊತ್ತಿದ್ದಾರೆ. ಅಪರೂಪದಲ್ಲಿ ಅಪರೂಪ ಇಂತಹ ಶಾಸಕರು.