ಪಾವಗಡ ಗಡಿನಾಡಿನ ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಕಟ್ಟಿ ಕೊಂಡು ಹಲವಾರು ವರ್ಷಗಳಿಂದ ಕರ್ನಾಟಕ ಭೂಪಟದಲ್ಲಿ ಬಡತನ, ವಲಸೆ, ಯಿಂದ ತೂಗುತ್ತಿರುವ ನಾಡಿನಲ್ಲಿ ಬಲಿಷ್ಠರ ಕಣ್ಣು ಬಿದ್ದು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಭೂ ಖದೀಮರದೇ ಕಾರುಬಾರಾಗಿರುವುದೊಂದು ಸಾಕ್ಷಿಯಾಗಿ ನಿಂತಿದೆ.

ಪಾವಗಡ ತಾಲ್ಲೂಕಿನಲ್ಲಿ ವಿಶ್ವದಲ್ಲೇ ಅತಿ ದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣವಾಗಿ,ಲಇತ್ತೀಚೆಗೆ ಜಮೀನುಗಳ ಬೆಲೆ ಗಗನಕ್ಕೆ ಏರಿರುತ್ತಿರುವುದು ದೃಷ್ಟಿಯಲ್ಲಿ ಇಟ್ಟುಕೊಂಡು ಭೂಕಳ್ಳರ ಕಳ್ಳಾಟಗಳು ಹೆಚ್ಚಾಗಿ ರಿಯಲ್ ಎಸ್ಟೇಟ್ ನೆಪದಲ್ಲಿ ಕಾಣದ ಕೈಗಳ ಅನುಗ್ರಹದಿಂದ ಭೂ ಖದೀಮರು ನಾಯಿಕೊಡೆಗಳಂತೆ ಬೆಳೆದು, ಇದರಲ್ಲಿ ಬಡಾ ಖದೀಮ ಸತ್ತೋದವರನ್ನು ಮತ್ತು, ವಲಸೆಹೋದವರ ಜಮೀನುಗಳನ್ನು ಗುಳುಂ ಮಾಡಲು ತಾಲ್ಲೂಕಿನ ಕೊಡಮಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಸರ್ವೇ ನಂಬರ್ 66/3 ರ ಜಮೀನು ಪರಿಶಿಷ್ಟ ವರ್ಗದವರಾದ ದಿವಂಗತ ಭೂತಪ್ಪ ಕೋಂ ಗಂಗಮ್ಮ ಎಂಬುವರು ಸತ್ತೋಗಿ ಸುಮಾರು 40 ವರ್ಷಗಳಾದರೂ ಇವರ ಹೆಸರಲ್ಲಿದ್ದ ಸುಮಾರು 1.ಎಕರೆ 20 ಗುಂಟೆ ಜಮೀನು ನುಂಗಲು ತಾಲ್ಲೂಕಿನ ಅಪ್ಪಾಜಿಹಳ್ಳಿ ನಾರಾಯಣ ರೆಡ್ಡಿ ಎಂಬುವವರ ಕಣ್ಣು ಬಿದ್ದು, ಆ ಜಮೀನು ಕಬ್ಜ್ ಮಾಡಲು ಆಂದ್ರಪ್ರದೇಶದ ಹಿಂದೂಪುರ ತಾಲ್ಲೂಕಿನ ಪರಗಿ ಮಂಡಲಂನಲ್ಲಿ ವಾಸವಾಗಿದ್ದ ಭೂತಪ್ಪ ಎಂಬ ಹೆಸರಿನವರನ್ನು ಪಾವಗಡ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕೂರಿಸಿ, ಸತ್ತೋಗಿದ್ದ ಕೊಡಮಡಗು ಭೂತಪ್ಪ ಕೋಂ ಗಂಗಮ್ಮ ಇವರೇ ಎಂದು ಬ್ರಷ್ಟ ಅಧಿಕಾರಿಗಳೊಂದಿಗೆ ಕೈಜೋಡಿಸಿ, ಸಬ್ ಕಚೇರಿಯಲ್ಲಿ ಖರೀದಿಸಿದವನಂತೆ ರಿಜಿಸ್ಟ್ರಾರ್ ಮಾಡಿಸಿ, ಪಹಣಿಗಾಗಿ ಗ್ರಾಮ ಲೆಕ್ಕಾದಿಕಾರಿ ಕಚೇರಿಗೆ ಪೈಲ್ ಬಂದಾಗ, ಯಾರು ಈ ಭೂತಪ್ಪ?ಅಸಲು ಖಾವಂದರು ಸತ್ತೋಗಿ ಸುಮಾರು 40 ವರ್ಷಗಳಾಗಿದ್ದಾಗ ಸತ್ತೋಗಿದ್ದ ಭೂತಪ್ಪ ಯಾಗೇ ಬಂದ? ಹೇಗೆ ಬಂದ ಎಲ್ಲಿಂದ ಬಂದ? ಎಂದು ತರಾಟೆಗೆ ತೆಗೆದುಕೊಂಡಾಗ ಸತ್ಯ- ಸತ್ಯತೆ ಹೊರಬಿದ್ದು ಜಮೀನಿಗೆ ಸಂಬಂಧ ಪಟ್ಟವರು ಭೂ ಕಳ್ಳನ ವಿರುದ್ಧ ಆಡಳಿತ ಕಚೇರಿ ಅಧಿಕಾರಿಗಳ ಗಮನಕ್ಕೆ ತಂದು ಪಾವಗಡ ಪೋಲಿಸ್ ಠಾಣೆಯಲ್ಲಿ ದೂರು ಕೊಟ್ಟರೂ ಪ್ರಕರಣ ದಾಖಲಿಸದೇ ಮೀನಾ ಮೇಷ ಎಣೆಸುತ್ತಾ ಭೂ ಖದೀಮರನ್ನು ಉಳಿಸಿಕೊಳ್ಳುವ ಪ್ರಯತ್ನ ಸದ್ದಿಲ್ಲದೆ ನಡೆಯುತ್ತಿದೆ ಎಂದು ಆರೋಪಿಸುತ್ತಿದ್ದಾರೆ.

ಭೂ ಕದ್ದ ಭೂಪ ಅನುಕೂಲವಾದ ಅಧಿಕಾರಿಗಳಿಂದ ಸಾಕಿಕೊಂಡ ತಂಡಗಳಿಂದ ರಾಜಿ ಸಂಧಾನಗಳು, ಠಾಣೆಯಲ್ಲಿ ಪ್ರಕರಣ ದಾಖಲೆ ಆಗದಂತೆ ಕಾಣದ ಕೈಗಳಿಂದ ಅಧಿಕಾರಿಗಳಿಗೆ ಒತ್ತಡಗಳು ಬಚ್ಚಾವ್ ಆಗುವ ಪ್ರಯತ್ನಗಳು ಸದ್ದಿಲ್ಲದೆ ನಡೆಯುತ್ತಿವೆ, ಎಂದು ಗಮನಿಸಿದ ಜಮೀನು ಖಾವಂದರು, ಪ್ರಕರಣ ದಾಖಲಿಸಿಕೊಂಡು ತಪ್ಪಿತಸ್ಥರ ವಿರುದ್ಧ ಎಪ್.ಐ.ಆರ್.ಹಾಕಿ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
U
ಇದು ಹೀಗಿರುವಾಗ ಇದೇ ಕೊಡಮಡಗು ಗ್ರಾಮದ ಸರ್ವೇ ನಂಬರ್ ….ಒಂದರಲ್ಲಿ ಸುಮಾರು 32 ಗುಂಟೆ ಜಮೀನು ಇದೇ ಅಪ್ಪಾಜಿಹಳ್ಳಿ ನಾರಾಯಣ ರೆಡ್ಡಿ ಹೆಂಡತಿ ರೂಪ ಹೆಸರಿಗೆ ಮತ್ತೊಂದು ಜಮೀನು ಕಬ್ಜ್ ಮಾಡಿ, ಯಾರೋಬ್ಬರ ಹೆಸರಲ್ಲದ್ದ ಜಮೀನು ಮತ್ತೊಬ್ಬರನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕೂರಿಸಿ, ಹೆಂಡತಿ ಹೆಸರಿಗೆ ರಿಜಿಸ್ಟ್ರಾರ್ ಮಾಡಿಸಿರುವುದು ಬೆಳಕಿಬಂದು ಠಾಣೆ ಆವರಣದಲ್ಲಿ ರೂಪ ಅಪ್ಪಾಜಿಹಳ್ಳಿ ನಾರಾಯಣ ರೆಡ್ಡಿ ವಿರುದ್ಧ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲೆ ಆಗುತ್ತೋ ?ಅಥವಾ ಬ್ರಷ್ಟ ಭೂ ಕಳ್ಳರನ್ನು ಬಂದಿಸದೇ ಸಾಥ್ ನೀಡಿ ಉಳಿಸುತ್ತಾರೋ? ಅಥವಾ ಬಡಬಗ್ಗ ರೈತರು, ಅನಕ್ಷರಸ್ಥ ವಲಸೆ ಹೋದ ಕುಟುಂಬಗಳಿಗೆ ಅನ್ಯಾಯಮಾಡಲು ಭೂಕಳ್ಳರನ್ನು ಕೈಬಿಟ್ಟು ಕೂರುತಾರೋ ? ತಾಲ್ಲೂಕಿನ ಜನತೆ ಕಾದುನೋಡಬೇಕಾಗಿದೆ.