ಪಾವಗಡದ ಶ್ರೀ ದೇವಿ ಕನ್ನಿಕಾ ಭಜನಾ ಮಂಡಳಿಗೆ ಹಂಸ ಜ್ಯೋತಿ ಪ್ರಶಸ್ತಿಗೆ ಭಾಜನ

ಪಾವಗಡ. ಪಟ್ಟಣದ ದೇವಿ ಕನ್ನಿಕ ಭಜನಾ ಮಂಡಳಿಯವರಿಗೆ ಬೆಂಗಳೂರಿನ ಹಂಸ ಜ್ಯೋತಿ ಟ್ರಸ್ಟ್ ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಸಂಘದ ಎಲ್ಲಾ ಪದಾಧಿಕಾರಿಗಳನ್ನು ಗೌರವಿಸಿ ಹಂಸ ಜ್ಯೋತಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದ್ದಾರೆ.

 

 


ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಂಸ ಜ್ಯೋತಿ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಸಮಾರಂಭದಲ್ಲಿ, ಪಾವಗಡದ ದೇವಿ ಕನ್ನಿಕ ಭಜನಾ ಮಂಡಳಿಯವರು ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿರುವ ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಭಕ್ತಿಪರ ಸೇವೆಯನ್ನು ಪರಿಗಣಿಸಿ ಅವರನ್ನು ಸನ್ಮಾನಿಸಲಾಯಿತು.

 

 

ಈ ಸಂದರ್ಭದಲ್ಲಿ ಸಂಘದ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಸೇವೆಯನ್ನು ಗಣನೀಯವಾಗಿ ಮೆಚ್ಚಿ, ಸಂಘದ ಸಾಧನೆಗಳನ್ನು ಶ್ಲಾಘಿಸಲಾಯಿತು. ಭಜನಾ ಮಂಡಳಿಯ ಕಾರ್ಯವು ಭಕ್ತಿಯಲ್ಲಿ ಜನರನ್ನು ಒಗ್ಗೂಡಿಸುವ ಮಹತ್ವದ ಪ್ರಯತ್ನವೆಂದು ಉಪಸ್ಥಿತ ಗಣ್ಯರು ಅಭಿಪ್ರಾಯಪಟ್ಟರು.. ಈ ವೇಳೆ ನಿವೃತ್ತಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಹಾಜರಿದ್ದರು. ಸಂಘದ ಅಧ್ಯಕ್ಷರಾದ ಲಕ್ಷ್ಮಿ ಗುಂಡಯ್ಯ ಕಾರ್ಯದರ್ಶಿ, ವಿಜಯ ವೆಂಕಟೇಶ್, ಉಪಾಧ್ಯಕ್ಷರಾದ ಗೀತಾ ರಮೇಶ್, ರಾಧಾ, ಸುಧಾ ರಾಮಮೂರ್ತಿ,ಅಂಬುಜಾ ರಾಮನಾಥ್, ಯಶೋಧ ಪ್ರಭಾಕರ್, ಶೈಲಾ ರಾಮಾಂಜನ ಶೆಟ್ಟಿ, ಶಮಂತ ರಾಮಮೂರ್ತಿ ಅನಸೂಯ ಸುಬ್ರಮಣಿ ಅನಂತ ಲಕ್ಷ್ಮಿ, ಸರಸ್ವತಿ, ನವರತ್ನ, ರಾಜೇಶ್ವರಿ, ನಾಗಲತಾ ಸೇರಿದಂತೆ ಮತ್ತಿತರರು ಇದ್ದರು

Leave a Reply

Your email address will not be published. Required fields are marked *

error: Content is protected !!