ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್ತು ಸಂಸ್ಥೆಯ ವತಿಯಿಂದ 79ನೇ ಸ್ವಾತಂತ್ರ ದಿನಾಚರಣೆಯ ದಿನದಂದು ಸಂಸ್ಥೆಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಿ ನೇಮಕಾತಿ ಆದೇಶ ಹೊರಡಿಸಲಾಗಿದೆ ಈ ವಿಚಾರದ ಅಂಗವಾಗಿ ಪತ್ರಿಕಾಗೋಷ್ಠಿಯನ್ನು ನಗರದ ಸುಧಾ ಟಿ ಹೌಸ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಮತ್ತು ರಾಜ್ಯಾಧ್ಯಕ್ಷರು ಆದ ಶ್ರೀಯುತ. ಜಾನ್ ಜೆ. ಸಮುವೇಲ್ ಕಿಮ್ ರವರು, ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ ರಾಜ್ಯ ಉಸ್ತುವಾರಿಯಾದ ಶ್ರೀಯುತ ಮಣಿಕಂದನ್ ಎ ರವರು, ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಮ್ಮ ಸಂಸ್ಥೆಯು ಸಾರ್ವಜನಿಕ ವಲಯದಲ್ಲಿ ಬಡವರಿಗೆ ಕೂಲಿ ಕಾರ್ಮಿಕರಿಗೆ ತುಳಿತಕ್ಕೆ ಒಳಗಾಗಿರುವವರಿಗೆ, ದಲಿತರಿಗೆ ಅಲ್ಪಸಂಖ್ಯಾತರಿಗೆ, ಮಕ್ಕಳಿಗೆ ಮಹಿಳೆಯರಿಗೆ ಯುವಕರಿಗೆ ವೃದ್ಧರಿಗೆ ವಿಕಲಚೇತನರಿಗೆ ಎಲ್ಲಾ ರೀತಿಯಾದಂತಹ ಜನಸಾಮಾನ್ಯರಿಗೆ ಮಾನವ ಹಕ್ಕುಗಳ ಅರಿವನ್ನು ಮೂಡಿಸಿ ಮಾನವ ಹಕ್ಕುಗಳ ಸಂರಕ್ಷಣೆಗಾಗಿ ಕಾನೂನಿನ ಬಗ್ಗೆ ಜಾಗೃತಿ ಮೂಡಿಸುವಂತಹ ಕೆಲಸವನ್ನು ಸಾಮಾಜಿಕ ನ್ಯಾಯಕ್ಕೋಸ್ಕರ ಹೋರಾಟ ಮಾಡಿ ಭ್ರಷ್ಟಾಚಾರ ಅಕ್ರಮ ಅಪರಾಧಗಳನ್ನು ತಡೆದು ಕರ್ನಾಟಕ ರಾಜ್ಯದಲ್ಲಿ 4 ಮೂಳೆಗಳಲ್ಲಿ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರಿ ಸೌಲಭ್ಯ ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಸಾಮಾಜಿಕ ನ್ಯಾಯ ಮತ್ತು ಸಮಾಜ ಸೇವೆಯನ್ನು ಮಾಡುವುದು ನಮ್ಮ ಸಂಸ್ಥೆ ಮೂಲ ಉದ್ದೇಶವಾಗಿರುತ್ತದೆ, ಮತ್ತು ದೌರ್ಜನ್ಯಕ್ಕೆ ಒಳಗಾಗಿರ್ತಕ್ಕಂತ ಮಹಿಳೆಯರಿಗೆ, ಮಕ್ಕಳಿಗೆ, ವೃದ್ಧರಿಗೆ ಎಲ್ಲಾ ಸಾರ್ವಜನಿಕ ಜನರಿಗೆ ಸಾಮಾಜಿಕ ನ್ಯಾಯವನ್ನು ಕಾನೂನಾತ್ಮಕವಾಗಿ ಕೊಡುವುದರಲ್ಲಿ ಮುಂದಾಗಿರುತ್ತದೆ
ಈ ನಮ್ಮ ಸಂಸ್ಥೆಯಲ್ಲಿ ಸದಸ್ಯತ್ವ ನೊಂದಣಿಗಾಗಿ ಸಂಪರ್ಕಿಸಬೇಕಾದ ಸಂಖ್ಯೆಯನ್ನು ಕೂಡ ತಿಳಿಸಲಾಯಿತು ಸಾರ್ವಜನಿಕ ವಲಯದಲ್ಲಿ ಎಂತಹ ಸಮಸ್ಯೆಯಾಗಿದ್ದರು ಸರಿ ಆ ಸಮಸ್ಯೆಯನ್ನು ಬಗೆಹರಿಸುವುದಕ್ಕಾಗಿ ನಮ್ಮ ಸಂಸ್ಥೆ ಸಿದ್ಧವಾಗಿದೆ ನಮ್ಮ ಸಂಸ್ಥೆಯನ್ನು ಸಂಪರ್ಕಿಸಬೇಕಾದ 9148548032/ 9448769622 / 9964472361/ 7760423567 ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ರಾಷ್ಟ್ರೀಯ ಮಂಡಳಿ ಕಾರ್ಯದರ್ಶಿ ಜೆ.ಆಲ್ಬರ್ಟ್ ಮನೋರಾಜ್, ರಾಷ್ಟ್ರೀಯ ಮಂಡಳಿಯ ಖಜಾಂಚಿ ಆದ ಶ್ರೀಮತಿ. ಅನುಷಾ ರವರು, ರಾಷ್ಟ್ರೀಯ ನಿರ್ದೇಶಕರು ಆದ ನಾಗರಾಜ್ ರೆಡ್ಡಿ ರವರು, ರಾಜ್ಯ ಉಪಾಧ್ಯಕ್ಷರು ಆದ ಶ್ರೀಯುತ. ಬದ್ರಿ ನರಸಿಂಹ ರವರು ಮತ್ತು ನೂತನವಾಗಿ ಆಯ್ಕೆಯಾದ ರಾಜ್ಯ ಮಹಿಳಾ ಘಟಕದ ರಾಜ್ಯ ಸಭಾಧ್ಯಕ್ಷರು ಆದ ಶ್ರೀಮತಿ. ವೇದಶ್ರೀ ರವರು, ರಾಜ್ಯಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಘಟಕದ ರಾಜ್ಯಾಧ್ಯಕ್ಷೆ ಎನ್. ಅನಿತಾ ಅಕ್ಷರ, ರಾಜ್ಯ ಮಹಿಳಾ ಕಾರ್ಮಿಕ ಘಟಕದ ರಾಜ್ಯ ಅಧ್ಯಕ್ಷೆ ಶ್ರೀಮತಿ. ಶಾಂತಿ ಜೆ, ರಾಜ್ಯ ಮಹಿಳಾ ಕಾರ್ಯದರ್ಶಿ ಆರ್. ರಾಜೇಶ್ವರಿ, ತುಮಕೂರು ಜಿಲ್ಲಾಧ್ಯಕ್ಷರಾದ ಮಹಾಲಿಂಗಂ, ತುಮಕೂರು ಕಾರ್ಯಾಧ್ಯಕ್ಷರಾದ ಮಂಜುನಾಥ್ ಎಸ್ ಎಲ್ ಕಾರ್ಯದರ್ಶಿಯಾದ ಗಿರೀಶ್ ವಿ, ಭೂತಯ್ಯ ಡಿ, ರಾಜ್ಯ ಸಂಯೋಜಕರಾದ ರಮೇಶ್, ಕಾರ್ಯಕಾರಿ ಅಧ್ಯಕ್ಷರಾದ ಮುರಳಿ ಬಿ, ಎನ್, ಜಿಲ್ಲಾ ವ್ಯವಸ್ಥಾಪಕರಾದ ಮಹೇಶ್ ಜಿಲ್ಲಾ ಮುಖಂಡರು ಆದ ದೊಡ್ಡಯ್ಯ, ತುಮಕೂರು ಜಿಲ್ಲಾ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಶೋಭಾ, ಕಾರ್ಯದರ್ಶಿಯಾದ ಜಯಲಕ್ಷ್ಮಿ, ಜಂಟಿ ಕಾರ್ಯದರ್ಶಿ ದ್ರಾಕ್ಷಾಯಿಣಿ , ಕಾರ್ಯಕಾರಿ ಸದಸ್ಯರಾದ ನೇತ್ರಾವತಿ ಬೆಂಗಳೂರು ನಗರ ಜಿಲ್ಲಾಧ್ಯಕ್ಷರು ಆರ್ ಮಹೇಶ್, ಬೆಂಗಳೂರು ನಗರ ಜಿಲ್ಲೆ ಉಪಾಧ್ಯಕ್ಷರು ಆದ ರಮೇಶ್, ಬೆಂಗಳೂರು ನಗರ ಮಹಿಳಾ ಜಿಲ್ಲಾಧ್ಯಕ್ಷೆ ಮೀನಾ , ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ್ಯರಾದ ಅಭಿವೃದ್ಧಿ ವೆಂಕಟೇಶ್, ಬೆಂಗಳೂರು ನಗರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಘಟಕದ ಅಧ್ಯಕ್ಷರು ತೇಜಸ್ವಿನಿ, ಹಾಗೂ ತುಮಕೂರು ಜಿಲ್ಲಾ ಸದಸ್ಯರಾದ ಅಯ್ಯಪ್ಪನ್ ಆರ್, ಕೃಷ್ಣಮೂರ್ತಿ ಎ, ಬಾಬಣ್ಣ ಪೀಟರ್, ಗೀತಾ, ನಾಗಮಣಿ ಎನ್, ರಾಧಾ ಸೇರಿದಂತೆ ಅನೇಕ ಸದಸ್ಯರು ಭಾಗವಹಿಸಿದ್ದರು ಮತ್ತು ನೂತನವಾಗಿ ತುಮಕೂರು ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಯಾಗಿ ಸುನಿತಾ ಲಮಾಣಿ ಅವರನ್ನು ಆಯ್ಕೆ ಮಾಡಲಾಯಿತು.