ಜೀನಿ ಕಂಪನಿ ಮಾಲೀಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ. - Vidyaranjaka

ಜೀನಿ ಕಂಪನಿ ಮಾಲೀಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ.

 

ತುಮಕೂರು : ಶಿರಾ ತಾಲ್ಲೂಕು, ಕಸಬಾ ಹೋಬಳಿ, ಕಳ್ಳಂಬೆಳ್ಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಯರಗುಂಟೆಯಲ್ಲಿರುವ ಜೀನಿ ಎಂಬ ದೈತ್ಯ ಕಂಪನಿಯ ಮಾಲೀಕರಾದ ದಿಲೀಪ್ ಕುಮಾರ್ ವಿರುದ್ಧ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹೆಣ್ಣುಮಗಳೊಬ್ಬಳಿಂದ ಎಫ್ ಐ ಆರ್ ದಾಖಲಾಗಿರುವ ಪ್ರಸಂಗ ನಡೆದಿದೆ.

 

 

 

 

ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಪ್ರಕರಣವು ನಡೆದಿರುವುದು ಕಳೆದ 10 ದಿನಗಳ ಹಿಂದೆಯಾದರೂ ಪ್ರಭಾವಿ ಉದ್ಯಮಿ ಎಂಬ ಕಾರಣಕ್ಕಾಗಿ ಪ್ರಕರಣವು ತಡವಾಗಿ ಬೆಳಕಿಗೆ ಬಂದಿದೆ ಎನ್ನಲಾಗಿದೆ. ತನ್ನ ಮೇಲೆ ಜೀನಿ ಕಂಪನಿ ಮಾಲೀಕರಾದ ದಿಲೀಪ್ ಕುಮಾರ್ ಅವರು ಅತ್ಯಾಚಾರ ಯತ್ನ, ಅಸಭ್ಯ ವರ್ತನೆ ತೋರಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

 

 

 

 

ಈಕೆ ಇದೇ ಜೀನಿ ಕಂಪನಿಯಲ್ಲಿ ಕಳೆದ 10 ತಿಂಗಳಿಂದ ಜೀನಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಅಲ್ಲದೇ ಇದೇ ದಿಲೀಪ್ ಕುಮಾರ್ ಕಳೆದ 02-03 ತಿಂಗಳುಗಳಿಂದ ತನ್ನ ಹಿಂದೆ ಬಿದ್ದಿರುವುದಲ್ಲದೇ ಈ ಕಾರ್ಖಾನೆ ಮತ್ತು ಕಂಪನಿಯಲ್ಲಿ ಕೆಲಸ ನಿರ್ವಹಣೆ ಮಾಡುತ್ತಿರುವ ಹಲವಾರು ಯುವತಿ ಹಾಗೂ ಮಹಿಳೆಯರ ಮೇಲೆ ಈತ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಸಹ ಈಕೆ ಆರೋಪಿಸಿದ್ದಾಳೆ, ಆದರೆ ಅವರುಗಳು ಯಾರು ದೂರು ನೀಡಲು ಮುಂದೆ ಬರುತ್ತಿಲ್ಲ ಕಾರಣ ಇವರು ಪ್ರಭಾವಿ ಉದ್ಯಮಿ ಜೊತೆಗೆ ರಾಜಕೀಯವಾಗಿ ಸಹ ಬಲಾಡ್ಯರಾಗಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

 

 

 

 

ಅಲ್ಲದೇ ಶೀಘ್ರದಲ್ಲಿಯೇ ಈತನ ವಿರುದ್ಧ ಮತ್ತಷ್ಟು ಜನರು ದೂರು ಕೊಡಲು ಮುಂದಾಗುವ ನಿರೀಕ್ಷೆಯನ್ನು ತಾನು ಹೊಂದಿದ್ದು, ಇವರಿಂದ ಅನ್ಯಾಯವಾಗಿರುವ ಪ್ರತಿಯೊಬ್ಬರಿಗೂ ನ್ಯಾಯ ಒದಗಿಸಿಕೊಡಿ ಎಂದು ಅಂಗಲಾಚಿದ್ದಾರೆ.

Leave a Reply

Your email address will not be published. Required fields are marked *

error: Content is protected !!