ತುಮಕೂರು
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸಲು ಹಾಗೂ ಗ್ರಾಮೀಣ ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಜಿ.ಪಾಲನೇತ್ರಯ್ಯ ಅವರ ಮಾಲೀಕತ್ವದಲ್ಲಿ ಪ್ರಿಯಾ ಗಾರ್ಮೆಂಟ್ಸ್ ಪೆಬ್ರವರಿ.3 ರಂದು ಲೋಕಾರ್ಪಣೆಗೊಳ್ಳಲಿದೆ.
ಪ್ರಿಯಾ ಗಾರ್ಮೆಂಟ್ಸ್ ಆವರಣದಲ್ಲಿ ಚಾಮುಂಡೇಶ್ವರಿ ದೇವಸ್ತಾನದ ಉದ್ಘಾಟನೆಯಾಗಲಿದ್ದು ದೇವಾಲಯದ ಉದ್ಘಾಟನೆ ಅಂಗವಾಗಿ ಪೆ.1 ರಂದು ಸ್ಥಳಶುದ್ಧಿ, ಪುಣ್ಯಾಹ, ಗಣಪತಿ ಪೂಜೆ, ಅಂಕುರಾರ್ಪಣೆ, ನಾಂದಿ ಕಂಕಣಧಾರಣೆ ಕಳಸ ಸ್ಥಾಪನೆ, ವಾಸ್ತುಹೋಮ, ಸುದರ್ಶನ ಹೋಮ, ರಾಕ್ಷೆಘ್ನ ಹೋಮ ಅಘೋರಾಸ್ತ ಹೋಮ, ಪೂರ್ಣಾಹುತಿ, ಅಧಿವಾಸ ಪೂಜೆಗಳು, ದಿಕ್ಷಾಲಕರ ಬಲಿ, ಶಯನಾಧಿ ವಾಸ
ಪೆ. 2 ರಂದು ಬೆಳಗ್ಗೆ ಪ್ರತಿಷ್ಠಾಂಗ ಹೋಮಗಳು, ಪ್ರಾಣಪ್ರತಿಷ್ಠೆ ಕಲಾಹೋಮ, ಕಲಷಾಭಿಶೇಕ, ಚಂಡಿಕಾಹೋಮ, ಗಣಹೋಮ, ನವಗ್ರಹ ಹೋಮ ಕಾಲಭೈರವ ಹೋಮ, ಮಹಾ ಪೂರ್ಣಾಹುತಿ.ಜರುಗಲಿವೆ.
ಪೆ.3 ರಂದು ಮಾಜಿ ಶಾಸಕ ಡಿ ಸಿ ಗೌರೀಶಂಕರ್ ನೇತೃತ್ವದಲ್ಲಿ ಜಲಸಂಪನ್ಮೂಲ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪ್ರಿಯಾ ಗಾರ್ಮೆಂಟ್ಸ್ ಉದ್ಘಾಟಿಸುವರು,ಗೃಹಸಚಿವ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆ ವಹಿಸುವರು, ಸಹಕಾರ ಸಚಿವ ಕೆ ಎನ್ ರಾಜಣ್ಣ ಘನ ಉಪಸ್ತಿತಿ ವಹಿಸುವರು,
ಕೆ ಎಸ್ ಆರ್ ಟಿ ಸಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್ ಆರ್ ಶ್ರೀನಿವಾಸ್ ,ಕುಣಿಗಲ್ ಶಾಸಕ ಡಾ.ರಂಗನಾಥ್,ಪಾವಗಡ ಶಾಸಕ ಹೆಚ್.ವಿ .ವೆಂಕಟೇಶ್,ಚಿಕ್ಕಣ್ಣ ಸ್ವಾಮಿ ಕ್ಷೇತ್ರದ ಸುಕ್ಷೇತ್ರಾಧ್ಯಕ್ಷ ಡಾ.ಪಾಪಣ್ಣ,ಮಾಜಿಸಂಸದಎಸ್.ಪಿ.ಮುದ್ದಹನುಮೇಗೌಡ,ಮಾಜಿ ಶಾಸಕ ಷಫಿ ಅಹಮದ್,ಡಾ.ರಫೀಕ್ ಅಹಮದ್,ಮಾಜಿ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು,ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ ಮುಖ್ಯ ಅತಿಥಿಗಳಾಗಿ ಉಪಸ್ತಿತರಿರುವರು.
ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕಾಂಗ್ರೆಸ್ ಮುಖಂಡ ಜಿ.ಪಾಲನೇತ್ರಯ್ಯ ಮಾಜಿ ಎಪಿಎಂಸಿ ಉಪಾಧ್ಯಕ್ಷೆ ಎಸ್.ವಿಜಯಕುಮಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.