ಮನೆಯಲ್ಲಿದ್ದ ನೋಟುಗಳೇ ಮೂಷಿಕನಿಗೆ ಆಹಾರ !!!!!

ಸರಿಸುಮಾರು 2 ಲಕ್ಷ ಮೌಲ್ಯದ ನೋಟುಗಳನ್ನು ಇಲಿಗಳು ತಿಂದು ಹಾಕಿದ ಘಟನೆ  ತೆಲಂಗಾಣದ ವಿಕಾರಾಬಾದ್‌ ಜಿಲ್ಲೆಯ ಪರಿಗಿಯಲ್ಲಿ ನಡೆದಿದೆ.

 

ತನ್ನ ಪತಿಯನ್ನು ಕಳೆದ ಕೋವಿಡ್‌ ಸಮಯದಲ್ಲಿ ಕಳೆದುಕೊಂಡಿರುವ  ಶಿವಲೀಲಾ ಎಂಬ ಮಹಿಳೆಯು ತಾನು ಕಷ್ಟಪಟ್ಟು ದುಡಿದ ಕೂಡಿಟ್ಟದ್ದ ಸರಿಸುಮಾರ 2 ಲಕ್ಷ ರೂ. ಮೌಲ್ಯದ ನೋಟುಗಳನ್ನು ತನ್ನ ಅಡುಗೆ ಮನೆಯಲ್ಲಿನ ಪಡಿತರ ಅಕ್ಕಿಯ ಚೀಲದಲ್ಲಿ 8 ತಿಂಗಳ ಹಿಂದೆ ಯಾರಿಗೂ ತಿಳಿಯದಂತೆ ಬಚ್ಚಿಟ್ಟಿದ್ದರು, ಆದರೆ ಆ ವಿಷಯ ಅರಿತ ಮೂಷಿಕ (ಇಲಿ) ಇಲಿಗಳು ಅಕ್ಕಿಯ ಜೊತೆಗೆ ನೋಟುಗಳನ್ನೂ ಸಹ ತಿಂದು ಹಾಕಿದೆ. ತಡವಾಗಿ ನೋಡಿಕೊಂಡ ಶಿವಲೀಲಾ ಅವರು ಚಿಂದಿ ಚಿಂದಿಯಾಗಿದ್ದ ನೋಟುಗಳನ್ನು ಸ್ಥಳೀಯ ಬ್ಯಾಂಕ್‌ಗಳಲ್ಲಿ ತೆಗೆದುಕೊಂಡು ಹೋಗಿದ್ದಾಳೆ, ಆದರೆ ಆ ನೋಟುಗಳನ್ನು ಯಾರೂ ಸ್ವೀಕರಿಸಿದೇ ವಾಪಸ್ಸು ಕಳುಹಿಸಿದ್ದಾರೆ.

 

 

ಇದರಿಂದ ಅತೀವವಾಗಿ ಮನನೊಂದಿದ್ದಾರಲ್ಲದೇ, ತಾನು ಕಷ್ಟ ಪಟ್ಟು ಕೂಡಿಟ್ಟಿದ್ದ ಹಣವೆಲ್ಲಾ ಮೂಷಿಕನಿಗೆ ಆಹಾರವಾಗಿ ತನ್ನ ಆಹಾರಕ್ಕೆ ಕುತ್ತು ಬಂದಿದೆ ಎಂದು ಗೋಳಾಡುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!