ತುಮಕೂರು: ಫ್ಯಾಕ್ಟರಿ ಯೊಂದಕ್ಕೆ ಲೈನ್ ಎಳೆದು ಕೊಡಲು ಪ್ರಭಾವಿ ಗುತ್ತಿಗೆದಾರನಿಂದ 1 ಲಕ್ಷ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿಯೇ ಕೆಪಿಟಿಸಿಎಲ್ ಚೀಫ್ ಇಂಜಿನಿಯರ್ ತುಮಕೂರು ಲೋಕಾಯುಕ್ತ ಪೊಲೀಸರು ಬೀಸಿದ್ದ ಬಲೆಗೆ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.
ನಗರದ ಬಿ.ಹೆಚ್. ರಸ್ತೆಯ ಸಿದ್ಧಗಂಗಾ ಕಾಂಪ್ಲೆಕ್ಸ್ ನಲ್ಲಿರುವ ಕೆಪಿಟಿಸಿಎಲ್ ಚೀಫ್ ಇಂಜಿನಿಯರ್ ಕಚೇರಿಯಲ್ಲಿ ಸಿಇಇ ನಾಗರಾಜನ್ ಎಂ ಆರ್ ಎನ್ ರವರೆ ಇಂದು ಗುತ್ತಿಗೆದಾರನಿಂದ 50,000 ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. 1 ಲಕ್ಷರೂ ಲಂಚಕ್ಕೆ ಬೇಡಿಕೆ ಇಟ್ಟು ಮೊದಲ ಕಂತಾಗಿ ಆಗಸ್ಟ್ 4 ರಂದು 50,000 ರೂ ಪಡೆದಿದ್ದರನ್ನಲಾಗಿದೆ. ನಂತರ ಎರಡನೇ ಕಂತು ಪಡೆಯುವಾಗ ಸಿಕ್ಕಿಬಿದ್ದಿದ್ದಾರೆಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಎಸ್.ಪಿ. ವಾಲೀಭಾಷಾ ನೇತೃತ್ವದಲ್ಲಿ ಡಿ.ವೈ.ಎಸ್ಪಿ. ಗಳಾದ ಮಂಜುನಾಥ್ ಜಿ. ಹರೀಶ್. ಇನ್ಸ್‌ಪೆಕ್ಟರ್ ಗಳಾದ ಸತ್ಯನಾರಾಯಣ. ಶಿವರುದ್ರಪ್ಪ ಮೇಟಿ, ರಾಮರೆಡ್ಡಿ, ಸಲೀಂ, ಮತ್ತು ಇತರೆ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.
ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.