ಗೋವಿಂದಣ್ಣನ ಬಹಿರಂಗ ಕ್ಷಮೆ ಕೇಳಿ ತನ್ನ ತಪ್ಪು ಅರಿತ ಮುಸ್ಲಿಂ ಮಹಿಳೆ ರೇಷ್ಮಾ

ತುಮಕೂರು ತಮ್ಮೊಂದಿಗೆ ಅಶ್ಲೀಲವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿದ್ದ ಯುವತಿ ಇದೀಗ ಸಡನ್ ಯು ಟರ್ನ್ ಹೊಡೆದಿದ್ದು ಗೋವಿಂದರಾಜು ಏನು ತಪ್ಪಿಲ್ಲ ಕೇವಲ ಅವರು ಕ್ಯಾನ್ವಾಸ್ ವಿಚಾರವಾಗಿ ಮಾತನಾಡಿದ್ದಾರೆ, ಅದನ್ನು ತಪ್ಪಾಗಿ ಭಾವಿಸಿದ ನಾನು ಗೋವಿಂದರಾಜು ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಅವರ ಘನತೆಗೆ ಧಕ್ಕೆ ಬರುವಂತಹ ಕೆಲಸ ಮಾಡಿದ್ದೇನೆ ಆದ್ದರಿಂದ ಗೋವಿಂದರಾಜು ಬಳಿ ಕ್ಷಮೆ ಕೇಳುತ್ತೇನೆ ಎಂದು ನಗರದಲ್ಲಿ ಗೋವಿಂದರಾಜುರವರ ಮೇಲೆ ಆರೋಪ ಮಾಡಿದ ಮಹಿಳೆ ರೇಷ್ಮಾ ಹೇಳಿದ್ದಾರೆ.

 

 

 

 

ಈ ಬಗ್ಗೆ ಅವರು ಮಾಧ್ಯಮಗಳ ಮುಂದೆ ಹೇಳಿಕೆಯನ್ನು ನೀಡಿದ್ದು ಗೋವಿಂದರಾಜುರವರು ತಮ್ಮೊಂದಿಗೆ ಯಾವುದೇ ರೀತಿಯಾದ ಅಶ್ಲೀಲವಾಗಿ ಮಾತನಾಡಿಲ್ಲ ಅವರು ಕೇವಲ ಚುನಾವಣಾ ಪ್ರಚಾರದ ವಿಷಯವಾಗಿ ಮಾತನಾಡಿದ್ದು ನಾನು ಅವರನ್ನು ಎಷ್ಟು ಬಾರಿ ಜನರನ್ನು ಸೇರಿಸಿದ್ದೇನೆ ಬನ್ನಿ ಎಂದು ಕರೆದರೂ ಅವರು ಬರದಿರುವ ಕಾರಣ ನನಗೆ ಕೋಪ ಬಂದು ಹಾಗೂ ಅವರು ಮಾತನಾಡಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡು ಅವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಅವರ ಘನತೆಗೆ ಕುಂದು ತಂದಿದ್ದೇನೆ. ಅದರಿಂದ ಗೋವಿಂದರಾಜು ಹಾಗೂ ಅವರ ಕುಟುಂಬದವರ ಬಳಿ ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದ್ದಾರೆ. ಇನ್ನೂ ತಮ್ಮ ಹೆಸರಿನಲ್ಲಿ ಭಾನುವಾರ ಟೌನ್ ಹಾಲ್ ವೃತ್ತದಲ್ಲಿ ತಮಗೆ ಪರಿಚಯ ಇಲ್ಲದ ವ್ಯಕ್ತಿಗಳು ಮಹಿಳೆಯರನ್ನು ಕರೆತಂದು ಪ್ರತಿಭಟನೆ ಮಾಡಿಸಿದ್ದು ಈ ವಿಷಯ ಬೇರೆ ದಿಕ್ಕಿನಲ್ಲಿ ಸಾಗುತ್ತಿರುವುದರಿಂದ ತಾವು ಗೋವಿಂದರಾಜುರವರಿಗೆ ಕ್ಷಮೆಯನ್ನು ಕೋರುತ್ತ ತಾವು ಮಾಡಿದ್ದು ತಪ್ಪಾಯ್ತು ತಮ್ಮನ್ನು ಕ್ಷಮಿಸುವಂತೆ ಗೋವಿಂದರಾಜುವರವರಲ್ಲಿ ಹಾಗೂ ಅವರ ಕುಟುಂಬಸ್ಥರಲ್ಲಿ ಮನವಿ ಮಾಡುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!