ಪಕ್ಷೇತರರಾಗಿ ಚುನಾವಣಾ ರಣರಂಗಕ್ಕೆ ಇಳಿಯಲಿರುವ ಜೆಡಿಎಸ್‌ ಕಟ್ಟಾಳು ನರಸೇಗೌಡ

ತುಮಕೂರು: ನಗರ ವಿಧಾನಸಭಾ ಕ್ಷೇತ್ರಕ್ಕೆ ಜೆ.ಡಿ.ಎಸ್.‌ ಪಕ್ಷದ ಕಟ್ಟಾಳು, ಹಿರಿಯ ಮುಖಂಡ ನರಸೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ರಣರಂಗದಲ್ಲಿ ಸ್ಪರ್ಧಿಸಲಿದ್ದಾರೆ.

 

 

 

 

 

 

 

ಈ ಹಿಂದೆ ತಾನು ಜೆಡಿಎಸ್ ಪಕ್ಷದ ಟಿಕೇಟ್‌ ಆಕಾಂಕ್ಷಿಯಾಗಿದ್ದೆ, ಆದರೆ ಪಕ್ಷದ ವರಿಷ್ಠರು ನನಗೆ ಟಿಕೇಟ್‌ ನೀಡಲು ವಿಫಲರಾದರು, ತದನಂತರ ತುಮಕೂರು ರಾಜಕೀಯ ಚಿತ್ರಣಕ್ಕೆ ಅಟ್ಟಿಕಾ ಗೋಲ್ಡ್‌ ಕಂಪನಿ ಮಾಲೀಕರಾದ ಅಟ್ಟಿಕಾ ಬಾಬು ತಾನು ಜೆಡಿಎಸ್‌ ಪಕ್ಷದಿಂದ ತುಮಕೂರು ನಗರಕ್ಕೆ ಆಕಾಂಕ್ಷಿಯಾಗಿ ಬರಲಿದ್ದೇನೆ ನನ್ನನ್ನು ಬೆಂಬಲಿಸಿ ಎಂದು ಕೋರಿದ್ದರು, ಅವರು ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ನೆರವಾಗಿದ್ದ ಕಾರಣಕ್ಕೆ ನಾನು ಅವರನ್ನು ಬೆಂಬಲಿಸಲು ಮುಂದಾದೆ, ಆದರೆ ಅವರಿಗೂ ಸಹ ಜೆಡಿಎಸ್‌ ಪಕ್ಷದಿಂದ ಟಿಕೇಟ್‌ ನೀಡಲಿಲ್ಲ.

 

 

 

 

 

 

 

 

ಮುಂದುವರೆದು ಅಟ್ಟಿಕಾ ಬಾಬು ಅವರು ಜೆಡಿಎಸ್‌ ಪಕ್ಷದಿಂದ ಟಿಕೇಟ್‌ ವಂಚಿತರಾದ ಕಾರಣ, ಅವರು ಕಾಂಗ್ರೆಸ್‌ ಪಕ್ಷದಿಂದ ಟಿಕೇಟ್‌ ತರುವುದಾಗಿ ಹೇಳಿದ್ದರು, ಅದಕ್ಕೂ ಸಹ ನಾನು ಬೆಂಬಲವನ್ನು ಸೂಚಿಸಿದ್ದೆ, ಇತ್ತೀಚೆಗೆ ಕಾಂಗ್ರೆಸ್‌ ಪಕ್ಷವೂ ಸಹ ಅವರಿಗೆ ಟಿಕೇಟ್‌ ನೀಡುವಲ್ಲಿ ವಿಫಲವಾದ ಕಾರಣ ಅವರು ತುಮಕೂರಿನಿಂದ ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷದಿಂದ ಟಿಕೇಟ್‌ ಪಡೆಯಲು ಇಚ್ಛಿಸುತ್ತಿದ್ದಾರೆ, ಆದುದರಿಂದ ನಾನು ಇದೀಗ ಪಕ್ಷೇತರವಾಗಿ ಸ್ಪರ್ಧಿಸುತ್ತಿದ್ದೇನೆಂದು ನರಸೇಗೌಡರವರು ನಮ್ಮ ಮಾದ್ಯಮ ತಂಡದೊಂದಿಗೆ ಮತಾನಾಡಿ ತಮ್ಮ ಇಚ್ಛೆಯನ್ನು ಹೊರ ಹಾಕಿದ್ದಾರೆ.

 

 

 

 

 

 

ನಾನು ನನ್ನ ಸ್ನೇಹ ಬಳಗ ಹಾಗೂ ನಗರದ ವಿವಿಧ ಸಮುದಾಯದ ಮುಖಂಡರುಗಳೊಂದಿಗೆ ಇಂದು ಚರ್ಚಿಸಿ  ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ನಿರ್ಧರಿಸಿದ್ದೇನೆ ಎಂದರಲ್ಲದೇ  ಇನ್ನು ಮೂರು ದಿನಗಳೊಳಗಾಗಿ ಎಲ್ಲರನ್ನು ಭೇಟಿ ಮಾಡಿ ಚುನಾವಣೆ ವಿಷಯದ ಬಗ್ಗೆ ಚರ್ಚಿಸುತ್ತೇನೆ. ನಂತರ ಒಂದು ನಿರ್ಧಾರಕ್ಕೆ ಬಂದು ಎಲ್ಲ ವಿಷಯವನ್ನು ಪತ್ರಕರ್ತರೊಂದಿಗೆ ಮಾತನಾಡಿ ಅವರ ಸಲಹೆ ಸಹಕಾರವನ್ನು ಪಡೆಯುತ್ತೇನೆ. ಚುನಾವಣೆಗೆ ಸ್ಪರ್ಧಿಸುವುದು ಮಾತ್ರ ಖಚಿತ ಎಂದು ಪುನರುಚ್ಚರಿಸಿದರು.

 

 

 

 

 

 

 

ಪ್ರಸ್ತುತ ಜೆಡಿಎಸ್ ನಲ್ಲೇ ಇದ್ದೇನೆ ಆದರೆ ನಾನು ಇಷ್ಟು ವರ್ಷಗಳ ಕಾಲ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದೇನೆ. ಪಕ್ಷದಲ್ಲಿ ನನಗೆ ಅನ್ಯಾಯವಾಗಿದೆ ಇದರಿಂದ ಬೇಸತ್ತು ನನ್ನ ಸ್ನೇಹಿತರು, ಬೆಂಬಲಿಗರೊಂದಿಗೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮುನ್ನ ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯುತ್ತೇನೆ ಎಂದರು.

Leave a Reply

Your email address will not be published. Required fields are marked *

error: Content is protected !!