ಸಂಸ್ಕೃತೋತ್ಸವ -2022


ದಿನಾಂಕ :26-08-2022 ರಂದು ಕಡಬ ಗ್ರಾಮದಲ್ಲಿ ವಿವೇಕಸಿದ್ಧ ಸಂಸ್ಕೃತ ಪಾಠಶಾಲೆ, ಅಹೋಬಲ ಯೋಗಾನಂದ ಟ್ರಸ್ಟ್, ಕಡಬ ಸರ್ಕಾರಿ ಪಬ್ಲಿಕ್ ಸ್ಕೂಲ್ ಹಾಗೂ ಕೆ. ಆರ್. ಎಸ್ ಸಂಸ್ಕೃತ ಮತ್ತು ವೇದಾಧ್ಯಯನ ಅಕಾಡೆಮಿ ವತಿಯಿಂದ ಸಂಸ್ಕೃತೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ “ಕಿಶೋರ ಮಣಿಕಾ ” ಗ್ರಂಥವನ್ನು ಲೋಕಾರ್ಪಣೆಗೊಳಿಸಿ ,ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಈ ಶುಭ ಸಂದರ್ಭದಲ್ಲಿ ಶ್ರೀ. ದಯಾಶಂಕರ ಸ್ವಾಮೀಜಿ, ವಿದ್ವಾನ್. ಶೇಷಾದ್ರಿ ಅಯ್ಯಂಗಾರ್, ವಿದ್ವಾನ್. ಡಾ.ಕೃಷ್ಣಮೂರ್ತಿ ಜಿ ಕೂರ್ಸೆ, ಶ್ರೀ. ಬಲರಾಮೇ ಗೌಡ, ಮಾತೆ ಸರಸ್ವತಿ ಹಾಗೂ ಶಿಕ್ಷಕರಾದ ಶ್ರೀ.ಶಿವಣ್ಣ, ಸಿಬ್ಬಂದಿ ವರ್ಗ ಮತ್ತು ಸಂಸ್ಕೃತಾಭಿಲಾಷಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.

Leave a Reply

Your email address will not be published. Required fields are marked *

error: Content is protected !!