ತುಮಕೂರು ಮಹಾನಗರ ಪಾಲಿಕೆ ಇತ್ತೀಚೆಗೆ ಕರ್ನಾಟಕ ಉಚ್ಛನ್ಯಾಯಾಲಯಕ್ಕೆ ತುಮಕೂರು ನಗರದಲ್ಲಿ ರಸ್ತೆಗಳು ಬಹು ಸುಂದರವಾಗಿವೆ, ಯಾವುದೇ ರೀತಿಯಾದ ಗುಂಡಿಗಳು ಇಲ್ಲ, ಸುಳ್ಳು ವರದಿಯನ್ನು ನ್ಯಾಯಾಲಯಕ್ಕೆ ಕಿಡಿಗೇಡಿಗಳು ಸಲ್ಲಿಸಿದ್ದಾರೆಂದು ಸುಳ್ಳು ವರದಿ ನೀಡಿದ್ದ ಬೆನ್ನಲ್ಲೆ ಕುಣಿಗಲ್ ಮುಖ್ಯ ರಸ್ತೆಯಲ್ಲಿ ಇಂದು ಗುಂಡಿ ಬಿದ್ದಿರುವುದು ಪಾಲಿಕೆ ಇನ್ನೆಷ್ಟು ಚಂದವಾಗಿ ವರದಿ ನೀಡಿದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಇನ್ನು ನ್ಯಾಯಾಲಯಕ್ಕೇ ಸುಳ್ಳು ವರದಿ ನೀಡುವಂತಹ ದಿಟ್ಟತನ ತೋರಿರುವ ಪಾಲಿಕೆ, ಸಾರ್ವಜನಿಕರಿಗೆ ಇನ್ನೇಷ್ಟು ಪಾರದರ್ಶಕ ಆಡಳಿತ ನೀಡುತ್ತಿದೆ ಎಂಬುದನ್ನು ಸಾರ್ವಜನಿಕರು ಅರಿತುಕೊಳ್ಳಬೇಕಾಗಿದೆ.
ತುಮಕೂರು_ತುಮಕೂರು ನಗರದಲ್ಲಿ ಕಳೆದ ಒಂದು ವಾರದ ಹಿಂದೆ ಸುರಿದ ಭಾರಿ ಮಳೆಗೆ ತುಮಕೂರು ನಗರದಲ್ಲಿ ಸಾಕಷ್ಟು ತೊಂದರೆ ಉಂಟಾಗಿದ್ದು ಪಾಲಿಕೆ ವತಿಯಿಂದ ಸಾಕಷ್ಟು ಮುಂಜಾಗ್ರತ ಕ್ರಮ ಕೈಗೊಳ್ಳುವಲ್ಲಿ ಪಾಲಿಕೆ ನಿರತವಾಗಿದೆ.
ಇಂತಹ ಸಮಯದಲ್ಲಿ ತುಮಕೂರು ನಗರದ ಕುಣಿಗಲ್ ರಸ್ತೆಯ ಸದಾಶಿವನಗರದ ಹೇಮಾವತಿ ಕಚೇರಿ ಮುಂಭಾಗದಲ್ಲಿ ಹಟಾತ್ತನೆ ರಸ್ತೆ ಕುಸಿದಿದ್ದು ಸುಮಾರು 10 ಅಡಿಗೂ ಹೆಚ್ಚು ಆಳದ ಗುಂಡಿ ನಿರ್ಮಾಣವಾಗಿದ್ದು ವಾಹನ ಸವಾರರ ಬಲಿಗಾಗಿ ಕಾದು ಕುಳಿತಿದೆ.
ಇನ್ನು ನಗರಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿರುವುದರಿಂದ ಪ್ರತಿನಿತ್ಯ ಸಾವಿರಾರು ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು ರಸ್ತೆಯಲ್ಲಿ ಬೃಹತ್ ಗಾತ್ರದ ಗುಂಡಿ ಬಿದ್ದಿದ್ದು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದ್ದು ಕೂಡಲೇ ಪಾಲಿಕೆ ಅಧಿಕಾರಿಗಳು ಹಾಗೂ ಸಂಬಂಧ ಪಟ್ಟ ಇಲಾಖೆಗಳು ಮುಂಜಾಗ್ರತಾ ಕ್ರಮ ಕೈಗೊಂಡು ರಸ್ತೆ ಸರಿಪಡಿಸಬೇಕಿದೆ.