ಗ್ರಾಮೀಣ ಪ್ರತಿಭೆಗಳಿಗೆ ಉಜ್ವಲ ಭವಿಷ್ಯವನ್ನು ರೂಪಿಸಲು ಕ್ರೀಡೆ ಅವಶ್ಯಕ

ಕುಣಿಗಲ್: ಮಾನಸಿಕ ಮತ್ತು ದೈಹಿಕವಾಗಿ ಕ್ರೀಡೆ ಅತ್ಯಂತ ಶ್ರೇಷ್ಠ ಸಾಧನವೆಂಬುದು ಅವಶ್ಯಕವಾಗಿದೆ. ಕ್ರೀಡೆ ಎಂಬುದು ನಮ್ಮ ಜೀವನದ ಅವಿಭಾಜ್ಯ ಭಾಗವಾಗಿದೆ. ಯುವ ಆಟಗಾರರಿಗೆ ಸೂಕ್ತವೇದಿಕೆಯಾಗಿ ನಿರ್ಮಿಸಿದೆ. ದೈಹಿಕ ಸದೃಢತೆಗೆ ಪ್ರಮುಖ ಸಾಧನವಾಗಿರುವ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ತಮ್ಮ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಮಾಡಿಕೊಳ್ಳಲು ಕ್ರೀಡೆಯೆಂಬುದು ಅತ್ಯವಶ್ಯಕವಾಗಿದೆ. ನಮ್ಮ ಮ್ಯಾಡ್ ಮಾಕ್ಸ್ ತಂಡದಿಂದ ಆಯೋಜಿಸಬೇಕು. ನಮ್ಮ ತಂಡದ ಆಶಯ ಈ ನಿಟ್ಟಿನಲ್ಲಿ ತಂಡಗಳ ಹೆಸರುಗಳನ್ನು ನಮ್ಮ ನೆಲದ ನಾಯಕರ ಕೊಡುಗೆಯನ್ನು ನೆನಪಿಸಲು ಅಂತಹ ನಾಯಕರ ತಂಡಗಳಿಗೆ ಸಂಗೊಳ್ಳಿರಾಯಣ್ಣ, ಒಡೆಯರು ಮತ್ತು ಕೆಂಪೆಗೌಡರು ಹೆಸರುಗಳನ್ನು ನಾಮಕರಣ ಮಾಡಲಾಯಿತ್ತು. ಮುಂದಿನ ದಿನಗಳಲ್ಲಿ ಕ್ರೀಡೆಯಲ್ಲಿ ಸಾಕಷ್ಟು ಉತ್ತೇಜನ ನೀಡಲಿದೆ ಎಂದು ಮ್ಯಾಡ್ ಮಾಕ್ಸ್ ತಂಡದ ಉಪನಾಯಕರಾದ ರಘು ರಮಾನಾನುಜಂ ರವರು ತಿಳಿಸಿದರು.

ಕುಣಿಗಲ್‌ನ ಕ್ರಿಕೆಟ್ ಟೂರ್ನ್‌ಮೆಂಟ್‌ನ್ನು ಟರ್ಪ್ ಮೈದಾನದಲ್ಲಿ ಡಿ.೪ ಮತ್ತು ೫ ರಂದು ಮ್ಯಾಡ್ ಮ್ಯಾಕ್ಸ್ ಪ್ರಿಮೀಯರ್ ಲಿಂಗ್ (ಲೇದರ್ ಬಾಲ್ ಟೂರ್ನ್‌ಮೆಂಟ್)ನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಅವರು ಇಂದಿನ ಮತ್ತು ಮುಂದಿನ ಪೀಳಿಗೆಗೆ ನಮ್ಮ ನೆಲದ ನಾಯಕರ ಪರಿಚಯ ಇರಲಿ ಹಾಗೇಯೆ ಅನ್ಯಭಾಷಿಕರಿಗೂ ಇವರ ಪರಿಚಯಿಸುವ ತವಕ ಜೊತೆಗೆ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಸೀಬೆ ಮತ್ತು ಹೊಂಗೆ ಗಿಡಗಳನ್ನು ನೆಡುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


ಇದೇ ಸಂದರ್ಭದಲ್ಲಿ ಮ್ಯಾಡ್ ಮಾಕ್ಸ್ ತಂಡದ ಪದಾಧಿಕಾರಿ ನಾಯಕರಾದ ಮಧುಗೌಡರವರು ಮಾತನಾಡುತ್ತಾ ಮನುಷ್ಯನ ದೇಹ ಮತ್ತು ಮನಸ್ಸಿನ ಸಮತೋಲನವನ್ನು ಕಾಪಾಡಿಕೊಳ್ಳಲು ಕ್ರೀಡೆಗಳು ಬಹಳ ಪ್ರಾಮುಖ್ಯ ಪಾತ್ರ ವಹಿಸುತ್ತದೆ. ಇಂದಿನ ಕೋರೋನ ಕಾಲಘಟ್ಟದಲ್ಲಿ ಒತ್ತಡ ಮತ್ತು ಆತಂಕವನ್ನು ಹೊರಬರಲು ಕ್ರೀಡೆಗಳು ಸಮತೋಲನವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಕ್ರೀಡಾಸ್ಫೂರ್ತಿಯವರ ಜೀವನ ಹಾಗೂ ಕೌಶಲ್ಯಗಳನ್ನು ಪ್ರತಿಯೊಬ್ಬರು ಆಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡ್ರೀಮ್ಸ್ ಇವೇಂಟ್ಸ್ ಅಂಡ್ ಮ್ಯಾನೇಜ್‌ಮೇಂಟ್‌ನ ಮಾಲೀಕರಾದ ಎನ್.ಬಾಲರವರು ಮಾತನಾಡುತ್ತಾ ಕ್ರೀಡೆಗಳಿಗೆ ಪ್ರೋತ್ಸಾಹ, ಕಲೆ, ಬೆಂಬಲ ಮತ್ತು ವೇದಿಕೆಗಳನ್ನು ಹುಟ್ಟು ಹಾಕುವುದು ಬಹಳ ಅಗತ್ಯವಾಗಿದೆ. ಇತಂಹ ಪ್ರಯತ್ನಗಳಿಗೆ ನಮ್ಮ ಸಂಸ್ಥೆ ಸದಾ ಮುಂದೆ ಇರುತ್ತದೆ. ಹಾಗೂ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರತಿಭೆಗಳನ್ನು ಹೊರಬರಲು ಸಂಸ್ಥೆ ಮುಂದೆ ಇರುತ್ತದೆ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಎಲ್ಲಾ ಪ್ರಾಯೋಜಕರು ನಮಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ.

ಇದು ಕೇವಲ ಮ್ಯಾಡ್ ಮಾಕ್ಸ್ ತಂಡದ ಆಟಗಾರರಷ್ಟೇ ಅಲ್ಲದೇ ನಮ್ಮೊಂದಿಗೆ ಬೆಂಗಳೂರಿನ ಅಲ್ ಸ್ಟಾರ್ಸ್ ಕ್ರಿಕೆಡ್ ಕ್ಲಬ್, ಯುಸಿಸಿ ತಂಡ, ಎಸ್.ಎಸ್.ಸಿ. ತಂಡ ಹಾಗೂ ಈಗಲ್ಸ್ ತಂಡದ ನಾಯಕರು ಮತ್ತು ಎಲ್ಲಾ ಆಟಗಾರರು ಭಾಗವಹಿಸಿದ್ದರು. ಎರಡನೇ ಪ್ರೀಮಿಯರ್ ಲೀಗ್‌ನಲ್ಲಿ ಕೆಂಪೇಗೌಡ ತಂಡ ಚಾಂಪಿಯನ್‌ಯಾಗಿ ಹೊರಹೊಮ್ಮಿತ್ತು. ಈ ಕ್ರೀಡಾ ಕೂಟದ ಯಶಸ್ವಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬೆಂಬಲ ನೀಡಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!