ಮೇಷ : ಈ ದಿನ ನಿಮಗೆ ಆರ್ಥಿಕವಾಗಿ ಲಾಭವನ್ನು ತರಲಿದೆ. ಉದ್ಯಮದಲ್ಲಿ ನಿಮಗೆ ಲಾಭ ಕಾದಿದೆ. ಸಹೋದರರ ಆರ್ಥಿಕ ಸಂಕಷ್ಟಕ್ಕೆ ನೀವು ಹೆಗಲಾಗಲಿದ್ದೀರಿ. ಕುಟುಂಬಸ್ಥರ ಜೊತೆಯಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಪ್ರಯಾಣ ಬೆಳೆಸಲಿದ್ದೀರಿ.
ವೃಷಭ : ಸಮಾಜದಲ್ಲಿ ನಿಮ್ಮ ಪ್ರತಿಷ್ಟೆ ಹೆಚ್ಚುವಂತಹ ಘಟನೆಯೊಂದು ನಡೆಯಲಿದೆ.ಮಕ್ಕಳು ಓದಿನಲ್ಲಿ ಹೆಚ್ಚಿನ ಸಾಧನೆಯನ್ನು ತೋರಲಿದ್ದಾರೆ. ಸಂಗಾತಿಯೊಂದಿಗೆ ಇಂದು ನೀವು ಹೆಚ್ಚಿನ ಸಮಯ ಕಳೆಯಲಿದ್ದೀರಿ. ಗರ್ಭಿಣಿಯರಿಗೆ ಈ ದಿನ ಲಾಭಕರವಾಗಿದೆ.
ಮಿಥುನ : ನಿರಂತರ ಪ್ರಯಾಣದಿಂದ ಆರೋಗ್ಯದ ಸಮಸ್ಯೆ ಎದುರಾಗಲಿದೆ. ಬೆಲ್ಲವನ್ನು ದಾನ ಮಾಡಿ. ಇದರಿಂದ ನಿಮ್ಮ ಕುಟುಂಬದಲ್ಲಿನ ಕಿರಿಕಿರಿಗೆ ಪರಿಹಾರ ಸಿಗಲಿದೆ. ಪೋಷಕರಿಂದ ಮಾರ್ಗದರ್ಶನ ಪಡೆದು ಉದ್ಯಮದಲ್ಲಿ ಬದಲಾವಣೆ ಮಾಡಲಿದ್ದೀರಿ.
ಕಟಕ : ಸಹೋದರಿಯು ನಿಮ್ಮ ಆರ್ಥಿಕ ಸಂಕಷ್ಟಕ್ಕೆ ಹೆಗಲು ನೀಡಲಿದ್ದಾರೆ. ವಾಹನ ಸವಾರಿ ಮಾಡುವಾಗ ಆದಷ್ಟು ಎಚ್ಚರಿಕೆಯಿಂದಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ಪತ್ನಿಯಿಂದ ಕೊಂಚ ಕಿರಿಕಿರಿ ಇರಲಿದೆ.
ಸಿಂಹ : ವೈವಾಹಿಕ ಸಂಬಂಧಕ್ಕೆಂದು ಅರಸುತ್ತಿರುವವರಿಗೆ ಇಂದು ಶುಭ ಸುದ್ದಿ ಕಾದಿದೆ. ವೃತ್ತಿ ಜೀವನದಲ್ಲಿ ನಿಮಗೆ ಯಶಸ್ಸು ಸಿಗಲಿದೆ. ಪದೇ ಪದೇ ಕೆಟ್ಟ ಕನಸು ಬೀಳುವುದರಿಂದ ಬೇಸತ್ತಿದ್ದೀರಾ. ಸೋಮವಾರದಂದು ಶಿವನಿಗೆ ರುದ್ರಾಭಿಷೇಕ ಮಾಡಿಸಿ. ಸಾರ್ವಜನಿಕ ಜೀವನದಲ್ಲಿ ಮೆಚ್ಚುಗೆ ಪಡೆಯುವಿರಿ.
ಕನ್ಯಾ : ಕಚೇರಿಯಲ್ಲಿ ನಿಮ್ಮ ಕೆಲಸವು ಮೇಲಾಧಿಕಾರಿಗಳಿಗೆ ಮೆಚ್ಚುಗೆ ಎನಿಸಲಿದೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಕೂಡ ಹೆಚ್ಚಲಿದೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಹೆಚ್ಚಾಗಲಿದೆ. ಹೊಸ ಉದ್ಯಮಗಳಿಗೆ ಹೂಡಿಕೆ ಮಾಡಲು ಬಯಸುವವರಿಗೆ ಇದು ಶುಭ ದಿನವಾಗಿದೆ.
ತುಲಾ : ನಿಮ್ಮ ವ್ಯಾಪಾರ- ವ್ಯವಹಾರಗಳ ವಿಚಾರದಲ್ಲಿ ತಂದೆಯು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಆರ್ಥಿಕ ವಿಚಾರವಾಗಿ ಸ್ನೇಹಿತರೊಂದಿಗೆ ಉಂಟಾಗಿದ್ದ ಮುನಿಸು ಕ್ರಮೇಣವಾಗಿ ಸುಧಾರಿಸಲಿದೆ. ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಅನಿವಾರ್ಯ.
ವೃಶ್ಚಿಕ : ಕಿರಿಯ ಸೋದರನ ಆರ್ಥಿಕ ಸಂಕಷ್ಟಕ್ಕೆ ನೀವು ಹೆಗಲಾಗಲಿದ್ದೀರಿ. ಇದು ನಿಮ್ಮ ಪೋಷಕರಿಗೆ ನಿಮ್ಮ ಮೇಲೆ ಪ್ರೀತಿ ಹೆಚ್ಚಿಸಲಿದೆ. ಮನೆಗೆ ಪೀಠೋಪಕರಣಗಳನ್ನು ಖರೀದಿ ಮಾಡಲಿದ್ದೀರಿ. ನಿಮ್ಮ ವೈವಾಹಿಕ ಸಂಬಂಧದ ಬಗ್ಗೆ ಪೋಷಕರು ಚರ್ಚೆ ನಡೆಸಲಿದ್ದಾರೆ.
ಧನು : ವ್ಯಾಪಾರ- ವ್ಯವಹಾರದಲ್ಲಿ ನೀವು ಲಾಭವನ್ನು ಹೊಂದಲಿದ್ದೀರಿ. ಕಚೇರಿಯಲ್ಲಿ ಭಯಪಟ್ಟು ಕೆಲಸ ಮಾಡುವಂತಹ ಸನ್ನಿವೇಶ ಎದುರಾಗಲಿದೆ. ಹತ್ತಿರದ ಸಂಬಂಧಿಗಳ ಭೇಟಿ ಮನಸ್ಸಿಗೆ ಖುಷಿ ಎನಿಸಲಿದೆ. ವಿದ್ಯಾರ್ಥಿಗಳಿಗೆ ದೈವಾನುಗ್ರಹ ಇರಲಿದೆ.
ಮಕರ : ಪೂರ್ವಜರ ಆಸ್ತಿಯಿಂದ ನಿಮಗೆ ಲಾಭ ದೊರಕಿದೆ. ನಿಮ್ಮ ಜೀವನ ಸಂಗಾತಿಯಿಂದ ಧನಲಾಭ ಹೊಂದಲಿದ್ದೀರಿ. ವಿದ್ಯಾರ್ಥಿಗಳಿಗೆ ವಿದೇಶಿ ಪ್ರಯಾಣದ ಭಾಗ್ಯವಿದೆ. ವ್ಯಾಪಾರ – ವ್ಯವಹಾರಗಳಲ್ಲಿ ಸ್ಥಿರತೆಯನ್ನು ಕಾಣಲಿದ್ದೀರಿ.
ಕುಂಭ : ಜಾಗದ ವಿಚಾರಕ್ಕೆ ನೆರೆಮನೆಯವರ ಜೊತೆ ದೊಡ್ಡ ಗಲಾಟೆಯೇ ನಡೆಯಬಹುದು. ಯಾವುದೇ ಸಂದರ್ಭದಲ್ಲಿಯೂ ಮಾತಿನ ಮೇಲೆ ಹಿಡಿತವಿರಲಿ. ಇಂದು ನೀವು ಅನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸಲಿದ್ದೀರಿ. ಕುಲದೇವರನ್ನು ಪ್ರಾರ್ಥಿಸಿ.
ಮೀನ : ಹಿರಿಯ ಸಹೋದರನಿಂದ ನೀವಿಂದು ಲಾಭವನ್ನು ಗಳಿಸುವ ಸಾಧ್ಯತೆ ಇದೆ. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ನಿಮಗೆ ಮುನ್ನಡೆ ಕಾದಿದೆ. ಸೊಸೆಯು ಮನೆಯ ಶಾಂತಿಯನ್ನು ಕದಡುವ ಸಾಧ್ಯತೆ ಇದೆ.