ಕ್ಷೌರಿಕರಿಗೆ ಇ-ಶ್ರಮ್ ಕಾರ್ಡ್ ಮಾಡಲಾಯಿತು

ತುಮಕೂರಿನ ಕೆ.ಅರ್ ಬಡಾವಣೆಯ ಶ್ರೀರಾಮ ಮಂದಿರದಲ್ಲಿ ತುಮಕೂರು ತಾಲ್ಲೂಕು ಹಾಗು ನಗರ ಸವಿತಾ ಸಮಾಜದ ಪಧಾದಿಕಾರಿಗಳಿಗೆ ಕೇಂದ್ರ ಸರ್ಕಾರದ ಇ-ಶ್ರಮ್ ಕಾರ್ಡ್ ನ ತಮ್ಮ ಮೊಬೈಲ್ ನಲ್ಲಿ ಹೇಗೆ ಮಾಡುವುದು ಎಂದು ತರಭೇತಿ ನೀಡಿ ಸ್ಥಳದಲ್ಲೆ ಪಧಾದಿಕಾರಿಗಳಿಗೆ ಇ-ಶ್ರಮ್ ಕಾರ್ಡ್ ಮಾಡಿಕೊಡಲಾಯಿತು.

ಈ ಸಂಧರ್ಭದಲ್ಲಿ ತುಮಕೂರು ತಾಲ್ಲೂಕು ನಗರ ಅಧ್ಯಕ್ಷರಾದ ಕಟ್ ವೆಲ್ ರಂಗನಾಥ್ ರವರು ಮಾತನಾಡಿ ಈಗಾಗಲೆ ಕರ್ನಾಟಕ ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆಯಿಂದ ನೀಡಿರುವ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಕಾರ್ಡ್ ನಮ್ಮ ರಾಜ್ಯ ಸರ್ಕಾರದ ಸವಲತ್ತನ್ನ ನೀಡಿದರೆ ಅದೇ ರೀತಿ ಇ-ಶ್ರಮ್ ಕಾರ್ಡ್ ಪಡೆಯುವುದರಿಂದ ಅಸಂಘಟಿತ ವಯಲಕ್ಕೆ ಸೇರಿರುವ ಕ್ಷೌರಿಕ ವೃತ್ತಿದಾರರಿಗೆ ಕೇಂದ್ರ ಸರ್ಕಾರದಿಂದ ಬರುವ ಸವಲತ್ತುಗಳು  ನೇರವಾಗಿ ನಮಗೆ  ಸಿಗುತ್ತದೆ ಎಂದರು. ಹಾಗಾಗಿ ಎಲ್ಲಾ ಸವಿತಾ ಸಮಾಜದ ಬಂಧುಗಳು ಈ ಕಾರ್ಡ್ ಮಾಡಿಸಿಕೊಳ್ಳಿ ಹಾಗೆ ಪಧಾದಿಕಾರಿಗಳು ಬಿಡುವಿನ ಸಮಯದಲ್ಲಿ ಸಲೂನ್ ಗಳಿಗೆ ತೆರಳಿ ಇ-ಶ್ರಮ್ ಕಾರ್ಡ್ ಮಾಡಿಕೊಡಬೇಕೆಂದು ತಿಳಿಸಿದರು.

ಈ ಸಂಧರ್ಭದಲ್ಲಿ ತುಮಕೂರು ತಾಲ್ಲೂಕು ನಗರ ಸವಿತಾ ಸಮಾಜದ ಪ್ರತಿನಿಧಿ ಸುರೇಶ್, ಉಪಾಧ್ಯಕ್ಷರಾದ ರವಿಕುಮಾರ್, ಕೋಶಾಧಿಕಾರಿಗಳಾದ ಮಂಜುನಾಥ್, ನಾಗವಲ್ಲಿ ಅಧ್ಯಕ್ಷರಾದ ಗೋಪಾಲ್, ಹೊನ್ನುಡುಕೆ ಅಧ್ಯಕ್ಷರಾದ ರಘುರಾಮ್, ವೆಂಕಟರಾಮ್, ಹಾಗು ಪಧಾದಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!